ಸೋಮವಾರ, ಮೇ 23, 2022
28 °C

ಬಸವ ಉತ್ಸವ ಪ್ರಚಾರ: ಡಿಸಿ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಮಾರ್ಚ್ 25 ರಿಂದ ಇಲ್ಲಿ ನಡೆಯುವ ಎರಡನೇ ಬಸವ ಉತ್ಸವದ ಪ್ರಚಾರ ರಥಕ್ಕೆ ಶುಕ್ರವಾರ ಇಲ್ಲಿ ಚಾಲನೆ ಕೊಡಲಾಯಿತು. ಜಿಲ್ಲಾಧಿಕಾರಿ ಸಮೀರ ಶುಕ್ಲಾ ಅವರು ಜ್ಯೋತಿ ಹೊತ್ತಿಸಿ ಉದ್ಘಾಟಿಸಿದರು.ಬಸವೇಶ್ವರ ವೃತ್ತದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ನಂತರ ಮುಖ್ಯರಸ್ತೆಯ ಮೂಲಕ ಅಂಬೇಡ್ಕರ ವೃತ್ತದವರೆಗೆ ವಾದ್ಯ ಮೇಳಗಳೊಂದಿಗೆ ರಥದ ಮೆರವಣಿಗೆ ನಡೆಯಿತು.ಅಖಿಲಭಾರತ ವೀರಶೈವ ಮಹಾಸಭೆ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಭೀಮಣ್ಣ ಖಂಡ್ರೆ, ಮುಚಳಂಬ ಪ್ರಣವಾನಂದ ಸ್ವಾಮಿ, ಬೀದರ ಅಕ್ಕ ಅನ್ನಪೂರ್ಣ, ಬೆಲ್ದಾಳ ಸಿದ್ಧರಾಮ ಶರಣರು, ಶರಣೆ ತೇಜಸ್ವೀನಿ, ಪರಮಾನಂದ ಸ್ವಾಮಿ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ, ಬಿಕೆಡಿಬಿ ಸದಸ್ಯ ವೈಜನಾಥ ಕಾಮಶೆಟ್ಟಿ, ಮಾದಿಗ ಸಮಾಜ ಸಂಘದ ಮುಖಂಡ ಯುವರಾಜ ಭೆಂಡೆ, ವೀರಶೈವ ಮಹಾಸಭೆ ತಾಲ್ಲೂಕು ಅಧ್ಯಕ್ಷ ಶಶಿಕಾಂತ ದುರ್ಗೆ, ನಗರಸಭೆ ಉಪಾಧ್ಯಕ್ಷ ಪಾಶಾಮಿಯ್ಯಾ ಜರಗಾರ, ಸದಸ್ಯ ಗುರುನಾಥ ದುರ್ಗೆ, ರವೀಂದ್ರ ಬೋರೋಳೆ, ನವಲಿಂಗಕುಮಾರ ಪಾಟೀಲ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.ನಂತರ ರಥವು ಹುಲಸೂರಕಡೆಗೆ ಹೊರಟಿತು. ಇದು ಮಾರ್ಚ್ 25 ರವರೆಗೆ ಜಿಲ್ಲೆಯಾದ್ಯಂತ ಸಂಚರಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.