ಸೋಮವಾರ, ಅಕ್ಟೋಬರ್ 14, 2019
22 °C

ಬಸವ ಕೃಷಿ ಪ್ರಶಸ್ತಿಗೆ ರಾಜೇಂದ್ರ ಸಿಂಗ್ ಆಯ್ಕೆ

Published:
Updated:

ಬಾಗಲಕೋಟೆ: ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದಿಂದ ಕೊಡಮಾಡುವ `ಬಸವ ಕೃಷಿ~ ಪ್ರಶಸ್ತಿಗೆ ಜೈಪುರದ ಜಲ ಸಂಪನ್ಮೂಲ ತಜ್ಞ ರಾಜೇಂದ್ರ ಸಿಂಗ್ ಆಯ್ಕೆಯಾಗಿದ್ದಾರೆ.ಇದೇ 15ರಂದು ಬೆಳೆಗ್ಗೆ 11 ಗಂಟೆಗೆ ಕೂಡಲಸಂಗಮದ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುವ ದ್ವಿತೀಯ ವರ್ಷದ ಬಸವ ಕೃಷಿ ಸಂಕ್ರಾಂತಿ ಸಮಾರಂಭದಲ್ಲಿ `ಬಸವ ಕೃಷಿ~ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ  ನಗರ ದಲ್ಲಿ ಗುರುವಾರ ಸುದ್ದಿ ಗೋಷ್ಠಿ ಯಲ್ಲಿ   ತಿಳಿಸಿ ದರು.ಪ್ರಶಸ್ತಿಯು 25,000 ರೂ ಪಾಯಿ ನಗದು, ತಾಮ್ರ ಫಲಕ ಹಾಗೂ ಸ್ವರ್ಣ ಪದ ಕಗಳನ್ನು ಒಳಗೊಂಡಿದೆ. ಪ್ರತಿಷ್ಠಿತ ಮ್ಯೋಗ್ಸೆಸೆ ಪ್ರಶಸ್ತಿ ಪುರಸ್ಕೃತ ರಾಜೇಂದ್ರಸಿಂಗ್ ಅವರು ಪ್ರಶಸ್ತಿ ಸ್ವೀಕರಿಸಿದ ಬಳಿಕ ರೈತರೊಂದಿಗೆ ಸಂವಾದ  ನಡೆಸಲಿದ್ದಾರೆ ಎಂದು ಹೇಳಿದರು.

 

Post Comments (+)