ಬಸವ ಪುತ್ಥಳಿ ಅನಾವರಣ

7

ಬಸವ ಪುತ್ಥಳಿ ಅನಾವರಣ

Published:
Updated:

ಬಸವಕಲ್ಯಾಣ: ಇಲ್ಲಿನ ಸಸ್ತಾಪುರ ಬಂಗ್ಲಾ ಹತ್ತಿರದಲ್ಲಿನ 95 ಅಡಿ ಎತ್ತರದ ಮಹಾದ್ವಾರದಲ್ಲಿನ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿದ ಬಸವಣ್ಣನವರ ಕಂಚಿನ ಅಶ್ವಾರೂಢ ಪುತ್ಥಳಿಯನ್ನು ಬುಧವಾರ ಸಂಜೆ ಅನಾವರಣಗೊಳಿಸಲಾಯಿತು.ಹಾರಕೂಡ ಚೆನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಅನಾವರಣಗೊಳಿಸಿದರು. ನಂತರ ಮಾತನಾಡಿದ ಅವ

ರು ಮಹಾದ್ವಾರದಲ್ಲಿ ಪುತ್ಥಳಿ ನಿರ್ಮಿಸಿರುವುದರಿಂದ ಶೋಭೆ ಹೆಚ್ಚಿದೆ ಎಂದರು.ಹುಲಸೂರ ಶಿವಾನಂದ ಸ್ವಾಮೀಜಿ ಮಾತನಾಡಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಇಲ್ಲಿ ಒಳ್ಳೆಯ ವಿಕಾಸ ಕಾರ್ಯ ನಡೆದಿದೆ ಎಂದು ಶ್ಲಾಘಿ ಸಿದರು. ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಮಾತನಾಡಿ ಅಭಿವೃದ್ಧಿ ಮಂಡಳಿಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಇದ್ದಾಗ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ ಎಂದರು. ಈಚೆಗೆ ಮಂಡಳಿಗೆ 5 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ಶಾಸಕರಾಗಿ ತಾವು ಕೈಗೊಂಡ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವರಿಸಿದರು.ಸಹಾಯಕ ಆಯುಕ್ತ ಪ್ರಕಾಶ ನಿಟ್ಟಾಲೆ ಸ್ವಾಗತಿಸಿದರು. ತಹಸೀಲ್ದಾರ ಶಿವರಾಜ ಹಲಬರ್ಗೆ ನಿರೂಪಿಸಿದರು. ನಗರಸಭೆ ಅಧ್ಯಕ್ಷೆ ಮಂಗಲಾಬಾಯಿ ಉದ್ರೆ, ಎಪಿಎಂಸಿ ಅಧ್ಯಕ್ಷ ಪ್ರಕಾಶ ಮೆಂಡೋಳೆ,ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ, ಪ್ರಮುಖರಾದ ಕೃಷ್ಣಪ್ಪ ನಾವದಗಿ, ಗದಗೆಪ್ಪ ಹಲಶೆಟ್ಟಿ, ರಾಜಕುಮಾರ ಹೊಳಕುಂದೆ, ತಹಸೀನ ಅಲಿ ಜಮಾದಾರ, ಮಲ್ಲಿಕಾರ್ಜುನ ಚಿರಡೆ, ಎಂ.ಕೆ.ನಂದಿ ಮುಂತಾದವರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry