ಸೋಮವಾರ, ಮೇ 17, 2021
31 °C

`ಬಸವ ವಸತಿ' ಯೋಜನೆಗೆ ಜೀವದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: 2010-11ನೇ ಸಾಲಿನಲ್ಲಿ ಶುರುವಾದ ಬಸವ ವಸತಿ ಯೋಜನೆ ಅಡಿಯಲ್ಲಿ ನಿರ್ಮಾಣವಾಗದೆ ರದ್ದಾಗಿದ್ದ 2,50,171 ಮನೆಗಳ ಫಲಾನುಭವಿಗಳಿಗೆ ಸಂತಸ ತರುವ ಸುದ್ದಿ ಇಲ್ಲಿದೆ. ನಿರ್ಮಾಣ ಶುರುವಾಗಿ ಸ್ಥಗಿತಗೊಂಡಿರುವ ಮನೆಗಳಿಗೆ ಅನುದಾನ ನೀಡಲು ಸರ್ಕಾರ ನಿರ್ಧರಿಸಿದೆ.ಈ ನಿಟ್ಟಿನಲ್ಲಿ ಎಲ್ಲ ಮನೆಗಳ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ಜೂನ್ 30ರೊಳಗೆ ವರದಿ ನೀಡುವಂತೆ ಎಲ್ಲ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿ ಕಾರಿಗಳಿಗೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮವು  ಮೊದಲ ಹಂತದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎಲ್ಲ ಮನೆಗಳ ವಾಸ್ತವ ವರದಿಯನ್ನು ಸಲ್ಲಿಸಬೇಕು.

ನಂತರ ಶೇ 10ರಷ್ಟು ಮನೆಗಳನ್ನು ಕಾರ್ಯ ನಿರ್ವಹಣಾಧಿಕಾರಿಗಳು ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಎಸ್. ಮಹದೇವ ಪ್ರಸಾದ್ ಸೂಚಿಸಿದ್ದಾರೆ.ಯೋಜನೆ ಅಡಿ ಅನುಮೋದನೆ ಪಡೆದರೂ ನಿರ್ಮಾಣಗೊಳ್ಳದ 96,762 ಮನೆಗಳನ್ನು ಮೊದಲ ಹಂತದಲ್ಲಿ, 89,237 ಮನೆಗಳನ್ನು 2ನೇ ಹಂತದಲ್ಲಿ ರದ್ದುಗೊಳಿಸಲಾಗಿತ್ತು.

ಒಟ್ಟಾರೆ 2,50,171 ಮನೆಗಳು ರದ್ದಾಗಿದ್ದವು. ನಿರ್ಮಾಣ ಕಾರ್ಯ ಶುರುವಾಗಿರುವ ಮನೆಗಳ ರದ್ದತಿಯನ್ನು ತೆರವು ಗೊಳಿಸಿ ಅನುದಾನ ಬಿಡುಗಡೆ ಮಾಡಬೇಕು ಎಂದು ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು.ಈ ನಿಟ್ಟಿನಲ್ಲಿ ಅನುಮೋದಿತ ಫಲಾನುಭವಿಗಳು ಮನೆ ನಿರ್ಮಾಣ ಶುರು ಮಾಡಿರುವ ಬಗ್ಗೆ ಒಂದು ವಾರದೊಳಗೆ ಪಿಡಿಓಗಳಿಂದ ವಾಸ್ತವಾಂಶ ವರದಿ ಪಡೆದು, ಶೇ 10ರಷ್ಟು ಮನೆಗಳನ್ನು ಕಾರ್ಯ ನಿರ್ವಾಹಕ ಅಧಿಕಾರಿಗಳಿಂದ ಪರಿಶೀಲಿಸಿ, ಆ ವರದಿಯನ್ನು ಆಧರಿಸಿ, ನಿರ್ಮಾಣ ಆರಂಭವಾಗಿ ರುವ ಮನೆಗಳಿಗೆ ಅನುಮೋದನೆ ನೀಡಿ, ಉಳಿದವನ್ನು ಕೈಬಿಡಬಹುದು ಎಂದು ವಸತಿ ಸಚಿವರು ಬರೆದ ಟಿಪ್ಪಣಿ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.ತಳಪಾಯ, ಗೋಡೆ, ಛಾವಣಿ ಪ್ರಗತಿಯಲ್ಲಿರುವ ಮನೆಯ ಭಾವಚಿತ್ರದೊಡನೆ ವರದಿ ಸಲ್ಲಿಸಬೇಕು. ಅದನ್ನು ಕಾರ್ಯನಿರ್ವಹಣಾಧಿಕಾರಿ ದೃಢೀಕರಿಸ ಬೇಕು. ನಂತರ ಫಲಾನುಭವಿಗಳ ಪಟ್ಟಿಯನ್ನು ತಾಲ್ಲೂಕು ಪಂಚಾಯಿತಿ ನೋಡಲ್ ಅಧಿಕಾರಿಗಳು ಪರಿಶೀಲಿಸಬೇಕು. ನಂತರ ಗ್ರಾಮ ಪಂಚಾಯಿತಿವಾರು ಕ್ರೋಡೀಕರಿಸಿದ ಪಟ್ಟಿಯನ್ನು ನಿಗಮಕ್ಕೆ ಕಾರ್ಯ ನಿರ್ವಾಹಕ ಅಧಿಕಾರಿಗಳೇ ಹಾಜರಾಗಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.2ರಂದು ವರದಿ:  ಜುಲೈ 2ರಂದೇ ವರದಿಯನ್ನು ಸರ್ಕಾರಕ್ಕೆ ನಿಗಮವು ಸಲ್ಲಿಸಲು ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ಸಾಧ್ಯವಾದಷ್ಟು ಬೇಗ ಮನೆಗಳ ನಿರ್ಮಾಣದ ವಾಸ್ತವ ವರದಿಯನ್ನು ಸಿದ್ಧಪಡಿಸು ವಂತೆ ಜಿಲ್ಲೆಯ ಎಲ್ಲ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಎಂ. ಝಲ್ಫಿಕರ್‌ಉಲ್ಲಾ `ಪ್ರಜಾವಾಣಿ'ಗೆ ತಿಳಿಸಿದರು.ಯೋಜನೆ ಅಡಿಯಲ್ಲಿ ಅನುಮೋದನೆ ಪಡೆದ ಮನೆಗಳು, ರದ್ದಾದ ಮನೆಗಳು ಮತ್ತು ಅನುಮೋ ದನೆ ರದ್ದತಿಯನ್ನು ತೆರವುಗೊಳಿಸಬೇಕಾದ ಮನೆಗಳ ಅಂಕಿ-ಅಂಶವನ್ನು ನಮೂದಿಸಿ ನಿರ್ದಿಷ್ಟ ನಮೂನೆ ಯಲ್ಲೇ ವರದಿಯನ್ನು ನಿಗಮಕ್ಕೆ ಸಲ್ಲಿಸ ಬೇಕಾಗಿದೆ. ಅದರ ಜೊತೆಗೆ, ಮನೆ ನಿರ್ಮಾಣ ಕಾಮಗಾರಿ ಶುರು ವಾದ ದಿನ, ಪ್ರಸ್ತುತ ನಿರ್ಮಾಣ ಹಂತ ಮತ್ತು ಕಾಮ ಗಾರಿ ಸ್ಥಗಿತಗೊಳ್ಳಲು ಕಾರಣಗಳನ್ನೂ ಪ್ರತ್ಯೇಕ ನಮೂನೆಯಲ್ಲಿ ಸಲ್ಲಿಸಿದ ಬಳಿಕ ವಷ್ಟೇ ಅನುಮೋದನೆ ರದ್ದತಿಯನ್ನು ತೆರವುಗೊಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.ಯೋಜನೆ ಅಡಿ ಜಿಲ್ಲೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮನೆಗಳಿಗೆ ಅನುಮೋದನೆ ದೊರಕಿತ್ತು. ಈಗ ಅವೆಲ್ಲಕ್ಕೂ ತಡೆ ಬಿದ್ದಿದೆ. ಅವುಗಳ ನಿರ್ಮಾಣಕ್ಕೆ ಮತ್ತೆ ಚಾಲನೆ ದೊರಕಬೇಕಾದರೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.