ಗುರುವಾರ , ಮೇ 13, 2021
18 °C

ಬಸವ ವಿಚಾರಧಾರೆ ಸದಾ ಪ್ರಸ್ತುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: `12ನೇ ಶತಮಾನದ ಮಹಾಪುರುಷ, ಮಹಾ ಮಾನವತವಾದಿ, ಸಮಾನತೆಯ ಹರಿಕಾರ ಬಸವೇಶ್ವರರ ವಿಚಾರಧಾರೆಗಳು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿವೆ~ ಎಂದು ಗಂಗಾವತಿ ಕ್ಷೇತ್ರದ ಶಾಸಕ ಪರಣ್ಣ ಮುನವಳ್ಳಿ ಮಂಗಳವಾರ ನಗರದಲ್ಲಿ ಹೇಳಿದರು.ಆನೆಗೊಂದಿ ರಸ್ತೆಯಲ್ಲಿರುವ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಬಸವೇಶ್ವರರ 871ನೇ ಜಯಂತಿ ಅಂಗವಾಗಿ ಕಂದಾಯ ಇಲಾಖೆ ಹಾಗೂ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಸವ ಧ್ವಜಾರೋಹಣ ನೆರವೇರಿಸಿದ ಮಾತನಾಡಿದರು.12ನೇ ಶತಮಾನದಲ್ಲಿಯೇ ಬಸವೇಶ್ವರರು ಸರ್ವ ಜನಾಂಗದ ಏಳ್ಗೆ ಮತ್ತು ಸಮಾನತೆಯ ಕನಸು ಹೊಂದಿದ್ದರು. ಆದರೆ ದುರಾದೃಷ್ಟ ಎಂದರೆ ಬಸವೇಶ್ವರರು ಕಾಲವಾಗಿ ಎಂಟು ನೂರು ವರ್ಷವಾದರೂ ಅವರ ವಿಚಾರಧಾರೆ ಸಾಮಾಜಿಕ ಸ್ತರದಲ್ಲಿ ಇನ್ನು ಚಾಲ್ತಿಗೆ ಬಂದಿಲ್ಲ ಎಂದು ವಿಷಾದಿಸಿದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ ತಂಗಡಗಿ ಮಾತನಾಡಿ, ಬಸವೇಶ್ವರರು ಯಾವುದೆ, ಜಾತಿ, ಧರ್ಮಕ್ಕೆ ಸೀಮಿತರಾದವರಲ್ಲ. ಅವರ ಆದರ್ಶ, ತತ್ವ ಎಲ್ಲ ಜಾತಿ ಜನಾಂಗಕ್ಕೂ ಅನ್ವಯಿಸುತ್ತವೆ ಎಂದರು.ಇದೇ ಸಂದರ್ಭದಲ್ಲಿ ಅಕ್ಕಮಹಾದೇವಿ, ಡೋಹರ ಕಕ್ಕಯ್ಯ, ಮಾದರ ಚನ್ನಯ್ಯ, ನಿಜಶರಣ ಅಂಬಿಗರ ಚೌಡಯ್ಯ, ಅಕ್ಕ ನಾಗಮ್ಮ, ಅಕ್ಕ ನಾಗಾಂಬಿಕಾ, ಅಲ್ಲಮ ಸೇರಿದಂತೆ 12ನೇ ಶತಮಾನದ ಪ್ರಭಾವಿ ಶರಣರ ವೇಷತೊಟ್ಟ ಮಕ್ಕಳು ಗಮನ ಸೆಳೆದರು.ತಹಸೀಲ್ದಾರ್ ಸಿ.ಡಿ. ಗೀತಾ, ತಾಲ್ಲೂಕು ಪಂಚಾಯಿತಿ ಕಾರ್ಯಾ ನಿರ್ವಾಹಕ ಅಧಿಕಾರಿ ಸಂಗಮೇಶ ಎನ್. ಮಠ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡಬಸಪ್ಪ ನೀರಲಕೇರಿ, ಡಿವೈಎಸ್‌ಪಿ ಡಿ.ಎಲ್. ಹಣಗಿ, ಪಿಐಗಳಾದ ಶಿವಕುಮಾರ, ಆರ್.ಎಸ್. ಉಜ್ಜನಕೊಪ್ಪ ಪಾಲ್ಗೊಂಡಿದ್ದರು.ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿಲ್ಲಿ ಕೊಂಡಯ್ಯ, ಅಮರೇಶ ಕುಳಗಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶರಣೇಗೌಡ ಮಾ.ಪಾ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಪಂಪನಗೌಡ, ರಾಜಕೀಯ ಪ್ರಮುಖರಾದ ಸಿದ್ದಾಪುರ ಮಂಜುನಾಥ, ಲಂಕೇಶ ಭೋವಿ ಇತರರಿದ್ದರು.ಬಸವೇಶ್ವರ ವೃತ್ತದಿಂದ ಮೆರವಣಿಗೆ ಆರಂಭಗೊಂಡ ಬಳಿಕ ಸಂಸದ ಎಸ್. ಶಿವರಾಮಗೌಡ ಆಗಮಿಸಿ ಪಾಲ್ಗೊಂಡರು. ಕೃಷ್ಣದೇವರಾಯ ವೃತ್ತದಿಂದ ಗಾಂಧಿವೃತ್ತದವರೆಗೂ ನಡೆದ ಮೆರವಣಿಗೆಯಲ್ಲಿ ಸಂಸದ, ಉಬಯ ಶಾಸಕರು ಪಾಲ್ಗೊಂಡು ಕಳೆ ಹೆಚ್ಚಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.