ಬಸಾಪುರ: ಶಾಲೆಗೆ ಗ್ರಾಮಸ್ಥರಿಂದ ಮುತ್ತಿಗೆ

ಶನಿವಾರ, ಮೇ 25, 2019
33 °C

ಬಸಾಪುರ: ಶಾಲೆಗೆ ಗ್ರಾಮಸ್ಥರಿಂದ ಮುತ್ತಿಗೆ

Published:
Updated:

ಗುತ್ತಲ: ಎಸ್‌ಡಿಎಂಸಿ ಅಧ್ಯಕ್ಷರು ಶಾಲೆಯ ಉಪಕರಣಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಸಮೀಪದ ಬಸಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿ ಭಟಿಸಿದ ಘಟನೆ ಮಂಗಳವಾರ ನಡೆಯಿತು.|ಶಾಲೆಯ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿದ ನಂತರ ಎರಡು ಲಕ್ಷ ಬೆಲೆ ಬಾಳುವ ನಾಲ್ಕು ಸಾವಿರ ಹಂಚು ಹಾಗೂ ಬೆಲೆ ಬಾಳುವ ಕಟ್ಟಿಗೆ ಯನ್ನು ತಮಗೆ ಬೇಕಾದವರಿಗೆ ಅಧ್ಯಕ್ಷ ಕರಿಯಲ್ಲಪ್ಪ ಚಾವಡಿ ಕೇವಲ 12 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ಪ್ರತಿಭಟನಾ ಕಾರರು ದೂರಿದರು.ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಸಣ್ಣ ಕೊಂಬಳಿ, ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕರಿಯಲ್ಲಪ್ಪ ಚಾವಡಿ ಶಾಲೆಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ.

ಅಲ್ಲದೆ ಸರ್ಕಾರದಿಂದ ಮಂಜೂರಾದ ಶಾಲಾ ಕೊಠಡಿಗಳನ್ನು ತಾವೆ ನಿರ್ಮಿಸುತ್ತಿದ್ದು, ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಆರೋಪಿಸಿದರು. ಮೇಲಾಧಿಕಾರಿಗಳು ಮಾರಾಟ ಮಾಡಿದ ಉಪಕರಣಗಳ ಕುರಿತು ಹಾಗೂ ಕಳಪೆ ಕಾಮಗಾರಿ ಕುರಿತು ತನಿಖೆ ನಡೆಸಿ ಅಧ್ಯಕ್ಷರ ವಿರುದ್ದ ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿದರು. ಇಲ್ಲದಿದ್ದರೆ ಶಾಲೆಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.ಇದೇ ಸಂದರ್ಭದಲ್ಲಿ ಬಸಪ್ಪ ಇಪ್ಪಿ ಕೊಪ್ಪ, ಬಿ.ಜಿ.ಹೋರಕೇರಿ, ನಾಗಪ್ಪ ವಡ್ಡರ, ನಿಂಗಪ್ಪ ಕೇಸರಳ್ಳಿ, ತಿರಕಪ್ಪ ಹೋಸಮನಿ, ಶಿವಪ್ಪ ಕನವಳ್ಳಿ, ಪರಮೇಶಪ್ಪ ಹಟ್ಟಗೆಂಚಣ್ಣ ನವರ, ಕರಿಯಪ್ಪ ಭಜಂತ್ರಿ ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry