ಬಸ್ಸಿನ ಮೇಲೆ ಪೆಟ್ರೋಲ್ ಬಾಂಬ್: ಯಾತ್ರಾರ್ಥಿಗಳಿಗೆ ಗಾಯ

ಸೋಮವಾರ, ಮೇ 20, 2019
33 °C

ಬಸ್ಸಿನ ಮೇಲೆ ಪೆಟ್ರೋಲ್ ಬಾಂಬ್: ಯಾತ್ರಾರ್ಥಿಗಳಿಗೆ ಗಾಯ

Published:
Updated:

ರಾಮನಾಥಪುರ, ತಮಿಳುನಾಡು (ಪಿಟಿಐ): ಉದ್ರಿಕ್ತ ಗುಂಪು ಬಸ್ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಕಾರಣ ಬಸ್‌ನಲ್ಲಿದ್ದ ಐದು ಜನ ಯಾತ್ರಾರ್ಥಿಗಳು ಗಾಯಗೊಂಡಿರುವ ಘಟನೆ ಜಿಲ್ಲೆಯ ಪಟ್ಟಣಂಕಥನ್‌ದಲ್ಲಿ ಜರುಗಿದೆ.ತಿರುಚಿರಾಪಳ್ಳಿ ಪೂಸರಿಪಟ್ಟಿಯ 50 ಜನ ಯಾತ್ರಾರ್ಥಿಗಳು ಕನ್ಯಾಕುಮಾರಿ, ತಿರುಚೆಂಡೂರ್ ಮತ್ತು ರಾಮೇಶ್ವರ ಪ್ರವಾಸ ಮುಗಿಸಿಕೊಂಡು ಹಿಂತಿರುಗುವಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ. ಘಟನೆಯಲ್ಲಿ ಬಸ್‌ಗೆ ಹಾನಿಯಾಗಿದೆ. ಘಟನೆಗೆ ಕಾರಣರಾದ ದುಷ್ಕರ್ಮಿಗಳ ಪತ್ತೆಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ. ಈವರೆಗೆ ಯಾರ ವಿರುದ್ಧವೂ ಎಫ್‌ಐಆರ್ ದಾಖಲಿಸಿಲ್ಲ ಎಂದು ಅವರು ಹೇಳಿದ್ದಾರೆ.ಪಚೇರಿ ಗ್ರಾಮದಲ್ಲಿ ಕುಡಿಯುವ ನೀರಿನ ಬಾವಿಗೆ ವಿಷ ಬೆರೆಸಿದ ಆರೋಪದ ಮೇರೆಗೆ 51 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸ್ಥಳೀಯ ಹುಡುಗಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ದಲಿತ ಹುಡುಗನನ್ನು ಸೆ. 9ರಂದು ಇದೇ ಗ್ರಾಮದಲ್ಲಿ ಕೊಲೆಗೈಯಲಾಗಿತ್ತು.ಕಳೆದ ರಾತ್ರಿ ಎರವಾಡಿಯ ಅಂಗಡಿಯೊಂದಕ್ಕೆ ಬೆಂಕಿ ತಗುಲಿ18 ವರ್ಷದ ಯುವಕನೊಬ್ಬ ಮೃತಪಟ್ಟಿದ್ದ. ಅಂಗಡಿ ಮಾಲೀಕ ಪೆಟ್ರೋಲ್ ಮಾರಾಟ ಮಾಡುತ್ತಿದ್ದ, ಇದರಿಂದ ಆಕಸ್ಮಿಕ ಬೆಂಕಿ ಹತ್ತಿಕೊಂಡು ಈ ಘಟನೆ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ತೂತ್ತುಕುಡಿ ಜಿಲ್ಲೆ ವಲ್ಲಂದುವಿನಲ್ಲಿ ದಲಿತ ಮುಖಂಡ ಜಾನ್ ಪಾಂಡಿಯನ್ ಬಂಧನ ವಿರೋಧಿಸಿ ಭಾನುವಾರ ಉಗ್ರ  ಪ್ರತಿಭಟನೆ ನಡೆಸುತ್ತಿದ್ದ ಗುಂಪಿನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಂದ 7 ಜನ ಸಾವನ್ನಪ್ಪಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry