ಗುರುವಾರ , ನವೆಂಬರ್ 21, 2019
20 °C

ಬಸ್ಸುಗಳ ಕೊರತೆ

Published:
Updated:

ಕೆಂಪೇಗೌಡ ಬಸ್ ನಿಲ್ದಾಣದಿಂದ ದೇವನಹಳ್ಳಿಗೆ ತೆರಳುವ ಬಿ.ಎಂ.ಟಿ.ಸಿ. ಬಸ್ಸುಗಳ ಸಂಖ್ಯೆ ಕಡಿಮೆಯಿದೆ. ಸಂಜೆ ವೇಳೆ ಸುಮಾರು 5.30 ರಿಂದ 6.30ರ ವರೆಗೆ ಯಾವುದೇ ಬಸ್ಸು ಬರುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ, ಹಿರಿಯ ನಾಗರಿಕರಿಗೆ ಮತ್ತು ಮಹಿಳೆಯರಿಗೆ ಪ್ರಯಾಣ ಮಾಡಲು ಬಹಳ ತೊಂದರೆಯಾಗಿದೆ.ದಯವಿಟ್ಟು ಈ ಸಮಯದಲ್ಲಿ ಹೆಚ್ಚು ಬಸ್ಸುಗಳು ಸಂಚರಿಸುವಂತೆ ಮಾಡಬೇಕಾಗಿದೆ. ಇನ್ನು ಕೆಲವು ಬಸ್ಸುಗಳು ಬಂದರೂ ಬಸ್ ನಿಲ್ದಾಣದಲ್ಲಿ ನಿಲ್ಲಿಸುವುದಿಲ್ಲ. ನಿರ್ವಾಹಕರನ್ನು ಕೇಳಿದರೆ ಬಸ್‌ನಲ್ಲಿ ಪುಲ್ ರಷ್ ಆಗಿದೆ ಎಂದು ಸುಳ್ಳು ನೆಪ ಕೊಡುತ್ತಾರೆ. ಇದರ ಬಗ್ಗೆ ಈ ಹಿಂದೆಯೂ ಸಾಕಷ್ಟು ಸಲ ಬರೆದುಕೊಂಡರೂ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ಇನ್ನಾದರೂ  ಸಂಬಂಧಪಟ್ಟ ಅಧಿಕಾರಿಗಳು ದೇವನಹಳ್ಳಿ ಮಾರ್ಗದ ಬಸ್ಸುಗಳ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಬೇಕೆಂದು ವಿನಂತಿ.

ಪ್ರತಿಕ್ರಿಯಿಸಿ (+)