ಬಸ್‌ಗಳಲ್ಲಿ ಗ್ಯಾಸ್ ಸಿಲಿಂಡರ್ ಸಾಗಿಸಿದರೆ ಕಠಿಣ ಕ್ರಮ

ಮಂಗಳವಾರ, ಜೂಲೈ 23, 2019
24 °C

ಬಸ್‌ಗಳಲ್ಲಿ ಗ್ಯಾಸ್ ಸಿಲಿಂಡರ್ ಸಾಗಿಸಿದರೆ ಕಠಿಣ ಕ್ರಮ

Published:
Updated:

ಚಿತ್ರದುರ್ಗ: ಪ್ರಯಾಣಿಕರು ಖಾಸಗಿ ಬಸ್‌ಗಳಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಂದ ಗ್ರಾಮೀಣ ಪ್ರದೇಶಗಳಿಗೆ ವಾಣಿಜ್ಯ ಹಾಗೂ ಗೃಹ ಬಳಕೆಯ ಎಲ್‌ಪಿಜಿ ಗ್ಯಾಸ್ ತುಂಬಿದ ಹಾಗೂ ಖಾಲಿ ಇರುವ ಸಿಲಿಂಡರ್‌ಗಳನ್ನು ಸಾಗಾಣಿಕೆ ಮಾಡುವುದು ಕಾನೂನುಬಾಹಿರ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎಚ್.ಜೆ. ತೆಂಬದ್ ತಿಳಿಸಿದ್ದಾರೆ.ಖಾಸಗಿ ಬಸ್‌ಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಾಗಾಣಿಕೆ ಮಾಡುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಪ್ರಯಾಣಿಕರಬಸ್‌ಗಳಲ್ಲಿ ಸಾಗಿಸುವಸಂದರ್ಭದಲ್ಲಿ ಸ್ಫೋಟಗೊಂಡಲ್ಲಿಜೀವ ಹಾನಿಯಾಗುವ ಸಂಭವವಿರುವುದರಿಂದ ಮತ್ತು ಕಾನೂನು ಪ್ರಕಾರ ಸಾಗಾಣಿಕೆಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.ಗೃಹ ಹಾಗೂ ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಪ್ರತ್ಯೇಕ ಸರಕು ವಾಹನಗಳ ಮೂಲಕ ಗ್ರಾಹಕರಿಗೆ ತಲುಪಿಸುವ ಜವಾಬ್ದಾರಿ ಸಂಬಂಧಿಸಿದ ಗ್ಯಾಸ್ ಕಂಪೆನಿಯ ವಿತರಕರ ಜವಾಬ್ದಾರಿ ಆಗಿರುತ್ತದೆ. ಸರ್ಕಾರದ ಸುತ್ತೋಲೆ ಅನ್ವಯ 5 ಕಿಲೋಮೀಟರ್ ಒಳಗಿದ್ದಲ್ಲಿ ಯಾವುದೇ ಸಾಗಾಣಿಕೆ ಶುಲ್ಕವಿರುವುದಿಲ್ಲಹಾಗೂ 5 ಕಿಲೋಮೀಟರ್ ಮೇಲ್ಪಟ್ಟಿದ್ದಲ್ಲಿ ಪ್ರತಿ ಕಿಲೋಮೀಟರ್‌ಗೆ 1.60 ರೂಪಾಯಿಗಳಂತೆ ಸಾಗಾಣಿಕೆ ದರವನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.ಬಸ್‌ಗಳಲ್ಲಿ ಸಿಲಿಂಡರ್‌ಗಳನ್ನು ಸಾಗಿಸುವುದು ಕಾನೂನು ಬಾಹಿರವಾಗಿದ್ದು ಸಾರಿಗೆ ಇಲಾಖೆ, ಪೊಲೀಸ್ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳಿಂದ ಜಂಟಿ ತಪಾಸಣೆ ಕೈಗೊಂಡು ಸಿಲಿಂಡರ್ ಸಾಗಣೆ ಮಾಡುವುದು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಸಿಲಿಂಡರ್‌ಗಳ ಸಾಗಾಣಿಕೆಯ ಮಾಹಿತಿ ಇದ್ದಲಿ ಸಾರ್ವಜನಿಕರು ಇಲಾಖೆಯ ಗಮನಕ್ಕೆ ತರಬೇಕು.  ಈ ಬಗ್ಗೆ ದೂರವಾಣಿ: 08194 230457  ಸಂಪರ್ಕಿಸುವಂತೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry