ಬಸ್‌ನಲ್ಲಿ ಬೆಂಕಿ: ಎಂಟು ಮಂದಿ ಸಜೀವ ದಹನ

7

ಬಸ್‌ನಲ್ಲಿ ಬೆಂಕಿ: ಎಂಟು ಮಂದಿ ಸಜೀವ ದಹನ

Published:
Updated:

ನಾಗಪುರ (ಪಿಟಿಐ):  ಯಾಂತ್ರಿಕ ದೋಷದಿಂದಾಗಿ ಬಸ್ಸಿನಲ್ಲಿ ಬೆಂಕಿ ಹೊತ್ತಿಕೊಂಡು ಪರಿಣಾಮ ಎಂಟು ಮಂದಿ ಸಜೀವ ದಹನವಾದ ಘಟನೆ ಸಮೀಪದ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸತ್ತರವರಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಇದ್ದಾರೆ. ನಾಗಪುರ- ಹಿಂಗಂಘಾಟ್ ಹೆದ್ದಾರಿಯಲ್ಲಿ ಈ ಅವಗಡ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ಅಜಯ್ ಅವಾಚತ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.`ಚಾಲಕ ಮತ್ತು ಕ್ಲೀನರ್ ಎಂಜಿನ್ ಪರೀಕ್ಷಿಸುತ್ತಿದ್ದಾಗ ದಿಢೀರನೇ ಬೆಂಕಿ ಹೊತ್ತಿಕೊಂಡಿದ್ದು, ಅವರಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಎಂಟು ಮಂದಿ ಬೆಂಕಿಗೆ ಬಲಿಯಾಗಿದ್ದು, ಆರು ಮಂದಿಗೆ ತೀವ್ರಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry