ಬಸ್‌ನಲ್ಲೇ ಸೌಂದರ್ಯ ಚಿಕಿತ್ಸೆ!

7

ಬಸ್‌ನಲ್ಲೇ ಸೌಂದರ್ಯ ಚಿಕಿತ್ಸೆ!

Published:
Updated:

ಡಿಕನ್ಸನ್ ರಸ್ತೆಯ ತನಿಷ್ಕ್ ಆಭರಣ ಮಳಿಗೆಯ ಮುಂದೆ ನಿಂತಿದ್ದ ಆ ಹವಾನಿಯಂತ್ರಿತ ಬಸ್ಸು ಚಕ್ರದ ಮೇಲೆ ಓಡುವ ಯಕಃಶ್ಚಿತ್ ಬಸ್ ಆಗಿರಲಿಲ್ಲ. ಬಸ್ ಕಮ್ ಬ್ಯೂಟಿಪಾರ್ಲರ್ ಕಮ್ ಜ್ಯುವೆಲ್ಸ್ ಶೋಕೇಸ್ ಆಗಿತ್ತು.`ತನಿಷ್ಕ್~ ಆಭರಣ ಮಳಿಗೆ ದುಡಿಯುವ ಮಹಿಳೆಯರಿಗಾಗಿಯೇ ವಿನ್ಯಾಸಗೊಳಿಸಿರುವ `ಮಿಯಾ~ ಆಭರಣ ಸಂಗ್ರಹದ ಪ್ರಚಾರ ರಾಯಭಾರಿ ಈ ಬಸ್. ಫೇಸ್‌ಬುಕ್ ಮತ್ತು ಟ್ವೀಟರ್ ಸದಸ್ಯರು ಪ್ರಚಾರಕರು!ಮಿಯಾ ಸಂಗ್ರಹದ ಕೆಟಲಾಗ್ ನೋಡಲೆಂದೋ, ಉಚಿತವಾಗಿ ಸೌಂದರ್ಯ ಚಿಕಿತ್ಸೆಗಳು ತಂಪು ವಾತಾವರಣದಲ್ಲಿ ಸಿಗುತ್ತದೆ ಎಂದೋ ಈ ಬಸ್ ಹತ್ತಿದರೆ ನಿಮ್ಮ ತಾಣ ಬರುವುದರೊಳಗೆ ಪೆಡಿಕ್ಯೂರ್, ಮೆನಿಕ್ಯೂರ್, ಫೇಷಿಯಲ್ ಸೇವೆಗಳು ಮುಗಿದಿರುತ್ತವೆ.ಅ.14ರವರೆಗೂ `ಮಿಯಾ~ ನಗರದಲ್ಲಿ ನಿಗದಿತ ಮಾರ್ಗದಲ್ಲಿ ಸಂಚರಿಸಲಿದೆ. ಅ.9ರ ಮಂಗಳವಾರ ಜಯನಗರ- ಎಂಬೆಸಿ ಗಾಲ್ಫ್ ಲಿಂಕ್‌ವರೆಗೆ, ಬುಧವಾರ ಕೋರಮಂಗಲದಿಂದ ಯಶವಂತಪುರದಲ್ಲಿರುವ ಆರ್‌ಎಂಜಡ್ ಎಕೋಸ್ಪೇಸ್‌ವರೆಗೆ, ಗುರುವಾರ ಕೋರಮಂಗಲದಿಂದ ಐಟಿಪಿಎಲ್, ಶುಕ್ರವಾರ ಜಯನಗರದಿಂದ ಯಶವಂತಪುರದಲ್ಲಿರುವ ವರ್ಲ್ಡ್ ಟ್ರೇಡ್ ಸೆಂಟರ್‌ವರೆಗೆ ಈ ಬಸ್ ಸಂಚರಿಸುತ್ತದೆ.ನಿಮಗೂ ಈ ಬಸ್‌ನಲ್ಲಿ ಬ್ಯೂಟಿ ಸೇವೆಗಳನ್ನು ಪಡೆದು `ಮಿಯಾ~ ಸಂಗ್ರಹವನ್ನು ಮುಂಗಡ ಕಾದಿರಿಸುವ ಬಯಕೆಯಿದ್ದರೆ ಞಜಿ.ಠಿಚ್ಞಜಿಟಿ.್ಚಟ.ಜ್ಞಿಗೆ ಲಾಗ್‌ಆನ್ ಆಗಿ ಹೆಸರು ನೋಂದಾಯಿಸಿಕೊಳ್ಳಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry