ಬಸ್‌ ನಿಲ್ದಾಣದಲ್ಲಿ ಸಬ್‌ ವೇ: ಪರಿಶೀಲನೆ

5

ಬಸ್‌ ನಿಲ್ದಾಣದಲ್ಲಿ ಸಬ್‌ ವೇ: ಪರಿಶೀಲನೆ

Published:
Updated:

ಮೈಸೂರು: ಸದಾ ಜನದಟ್ಟಣೆಯಿಂದ ಕೂಡಿರುವ ನಗರದ ಗ್ರಾಮಾಂತರ (ಸಬರ್ಬನ್‌) ಬಸ್‌ ನಿಲ್ದಾಣಕ್ಕೆ ಸಬ್‌ ವೇ ನಿರ್ಮಾಣ ಮಾಡುವ ಕುರಿತು ಶಾಸಕ ವಾಸು ಮಂಗಳವಾರ ಗ್ರಾಮಾಂತರ ಬಸ್‌ ನಿಲ್ದಾಣಕ್ಕೆ ತೆರಳಿ ಸ್ಥಳ ಪರಿಶೀಲಿಸಿದರು.ನೀಲಗಿರಿ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗಲು ಪ್ರಯಾಣಿಕರು ಹರಸಾಹಸ ಮಾಡಬೇಕು. ಸದಾ ವಾಹನಗಳ ಸಂಚಾರ ಇರುವುದರಿಂದ ರಸ್ತೆ ದಾಟುವುದೇ ಇಲ್ಲಿ ದುಸ್ತರ. ಅಲ್ಲದೇ ಪ್ರಿ ಪೇಯ್ಡ್‌ ಆಟೋದವರಿಗೆ ಸಮಸ್ಯೆ ಎದುರಿಸುತ್ತಿದ್ದರು. ಬಸ್‌ ನಿಲ್ದಾಣಕ್ಕೆ ಸಬ್‌ ವೇ ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂಬ ಬೇಡಿಕೆ ಬಹಳ ದಿನಗಳಿಂದ ಇತ್ತು.

ಹಾಗಾಗಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿದ ವಾಸು ಅವರು ಅಗತ್ಯ ಮಾಹಿತಿ ಪಡೆದರು. ಇದೇ ವೇಳೆ ಶಾಸಕರನ್ನು ಭೇಟಿಯಾದ ಆಟೊ ಚಾಲಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ನಿವಾರಣೆ ಮಾಡಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಶಾಸಕರು ಭರವಸೆ ನೀಡಿದರು.ಪಾಲಿಕೆ ಆಯುಕ್ತ ಪಿ.ಜಿ. ರಮೇಶ್‌, ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಕೃಷ್ಣ, ಪಾಲಿಕೆ ಸದಸ್ಯ ಪ್ರಶಾಂತ್‌ಗೌಡ, ಮಾಜಿ ಸದಸ್ಯ ಎಂ. ಶಿವಣ್ಣ, ಜನತಾ ಬಜಾರ್‌ ಅಧ್ಯಕ್ಷ ಎಸ್‌. ಚಂದ್ರಶೇಖರ್, ದೇವರಾಜ ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ಶಾಂತಮಲ್ಲಪ್ಪ, ಇನ್‌ಸ್ಪೆಕ್ಟರ್‌ ಪ್ರಭಾಕರ ಬಾರ್ಕಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry