ಸೋಮವಾರ, ಜೂನ್ 21, 2021
27 °C

ಬಸ್‌ ಸ್ಥಗಿತ: ಪ್ರಯಾಣಿಕರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಪ್ರತಿನಿತ್ಯ ಸಂಚರಿಸುತ್ತಿದ್ದ ಕೆಎಸ್‌­ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಯಾವುದೇ ಮುನ್ಸೂಚನೆ ಇಲ್ಲದೆ ಒಪ್ಪಂ­ದದ ಮೇರೆಗೆ ಬೇರೆಡೆ ಹೋಗಿ­ದ್ದರಿಂದ ಸೋಮವಾರ ಬೆಳಿಗ್ಗೆ 5.30ರಿಂದ ಸಂಜೆ 4ರವರೆಗೆ ಬಸ್‌­ಗಳಿಲ್ಲದೆ ನೂರಾರು ವಿದ್ಯಾರ್ಥಿ­ಗಳು ಮತ್ತು ಉದ್ಯೋಗಿಗಳು ಪರದಾಡಿ­ದರು.ಪಕ್ಕದ ಜಿಲ್ಲೆಯಾದ ಚಿಕ್ಕಬಳ್ಳಾಪುರ­ದಲ್ಲಿ ಸೋಮವಾರ ಎತ್ತಿನ ಹೊಳೆ ಯೋಜನೆಗೆ ಮುಖ್ಯಮಂತ್ರಿಗಳು ಶಿಲಾ­ನ್ಯಾಸ ನೆರವೇರಿಸುವ ಕಾರ್ಯ­ಕ್ರಮ­­ವಿದ್ದು, ಈ ಸಮಾರಂಭಕ್ಕೆ ಕೆಎಸ್‌­ಆರ್‌ಟಿಸಿ  ವತಿಯಿಂದ ಸಮಾರು 300–350 ಬಸ್‌ಗಳನ್ನು ನೀಡ­ಲಾಗಿದ್ದು, ಇನ್ನುಳಿದಂತೆ ದಿನನಿತ್ಯ ಓಡಾ­ಡುತ್ತಿದ್ದ ಖಾಸಗಿ ಬಸ್‌ಗಳು ಒಪ್ಪಂದದ ಮೇರೆಗೆ ನಿಯೋಜನೆಗೊಂಡಿದ್ದು, ಈ ಪರಿಸ್ಥಿತಿಗೆ ಕಾರಣವಾಯಿತು.ಬೆಳಗ್ಗೆ 9 ಗಂಟೆಯಷ್ಟರಲ್ಲಿ ಪಟ್ಟ­ಣದ ಸುಮಾರು 800 ರಿಂದ 900 ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು  ಸರಿಯಾದ  ಬಸ್‌ಗಳಿಲ್ಲದ ಕಾರಣ ಬಸ್‌ ನಿಲ್ದಾ­ಣದಲ್ಲಿ ಕಾಯುತ್ತಿದ್ದರು.ಇವ­ರೊಂದಿಗೆ ಯಲಹಂಕ ಮತ್ತು ಬೆಂಗಳೂರಿಗೆ ಪ್ರತಿನಿತ್ಯ ಶಾಲೆ,ಕಾಲೇಜು ಮತ್ತು ಕಚೇರಿ ಕೆಲಸಗಳಿಗೆ ಹೋಗುವ ನೂರಾರು ಉದ್ಯೋಗಿಗಳು ಸಹ ಬಸ್‌ಗಳಿಲ್ಲದ ಕಾರಣ ಪರದಾ­ಡುತ್ತಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.