ಬಸ್ ಅಪಘಾತ; 20 ಮಂದಿಗೆ ಗಾಯ

7

ಬಸ್ ಅಪಘಾತ; 20 ಮಂದಿಗೆ ಗಾಯ

Published:
Updated:

ಸಕಲೇಶಪುರ: ರಸ್ತೆ ಬದಿಯಲ್ಲಿದ್ದ ಮರಕ್ಕೆ ಬಸ್ಸು ಡಿಕ್ಕಿ ಹೊಡೆದ ಪರಿಣಾಮ 20 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ರಾಟೆಮನೆ ಸಮೀಪದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ.ಕುಂದಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಬೆಳಿಗ್ಗೆ 3 ಗಂಟೆ ಸುಮಾರಿಗೆ ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ನಾಲ್ವರು ಪ್ರಯಾಣಿಕರಿಗೆ ಕಾಲು ಹಾಗೂ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಗಾಯಾಳುಗಳಿಗೆ ಇಲ್ಲಿಯ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಹಾಗೂ ಬೆಂಗಳೂರಿಗೆ ಕಳೂಹಿಸಲಾಗಿದೆ.ಅಪಘಾತದಲ್ಲಿ ಬೆಂಗಳೂರು, ವಿಜಯನಗರ ಬಡಾವಣೆ ನಿವಾಸಿ ಸರೋಜ, ಅಕ್ಷತಾ, ಉಡುಪಿಯ ಆಶಾ, ರಾಮ ಬಂಗೇರ, ಜನಾರ್ಧನ ಬಂಗೇರ, ನಾಗಪ್ಪ, ವಿಜಯ ಎಸ್.ಬಂಗೇರ, ಸೌಮ್ಯ, ಬೆಂಗಳೂರಿನ ಸಿಟಿ ಬ್ಯಾಂಕ್ ಉದ್ಯೋಗಿ ಲೈಸ್ಯಾಂಡ್ರ, ಗುರುಮಲ್ಲೇಶ್, ಕುಂದಾಸಪುರದ  ಸುಧಾ, ಸ್ಯಾಂಟ್ರೋಮಿಥುನ್, ಕೆಸರಗೇರಿಯ ಚಿನ್ನೇಗೌಡ,  ಮದ್ದೂರಿನ ಗುರುಮಲ್ಲೇಶ್ ಕೋಲಾರದ ಎಕನಾಥ್ ಕಡೇರ, ಕುಂದಾಪುರದ ರಂಜಿತ, ದೆಸೆನ್, ಮಡಿಕೇರಿ ಜಿಲ್ಲೆ ಸಿದ್ದಾಪುರದ ಬಸ್ಸಿನ ಕಂಡಕ್ಟರ್ ನಾಗಪ್ಪ   ಮಂಗಳೂರಿನ ರವಿ ಮೊದಲಾದವರು ಗಾಯಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry