ಬಸ್-ಓಮ್ನಿ ಡಿಕ್ಕಿ ನಾಲ್ವರಿಗೆ ಗಾಯ

7

ಬಸ್-ಓಮ್ನಿ ಡಿಕ್ಕಿ ನಾಲ್ವರಿಗೆ ಗಾಯ

Published:
Updated:

ಯಳಂದೂರು: ತಾಲ್ಲೂಕಿನ ಅಗರ ಗ್ರಾಮದ ಬಳಿ ಗುರುವಾರ ಖಾಸಗಿ ಬಸ್ ಹಾಗೂ ಮಾರುತಿ ಓಮ್ನಿ ಡಿಕ್ಕಿಯಿಂದ ನಾಲ್ವರು ಗಾಯಗೊಂಡ ಘಟನೆ ನಡೆದಿದೆ.ತೀವ್ರ ಗಾಯಗೊಂಡ ಮಾಂಬಳ್ಳಿ ಗ್ರಾಮದ ಅಯೂಬ್‌ರವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನೂತನ ಜಿ.ಪಂ. ಸದಸ್ಯರಾದ ಕೇತಮ್ಮ, ಸಿದ್ದರಾಜು, ತಾ.ಪಂ. ಸದಸ್ಯ ಮಹೇಶ್‌ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.ವಾಹನ ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷ ತೋಟೇಶ್ ಎಂಬುವರಿಗೆ ಸೇರಿದ್ದಾಗಿದೆ. ಖಾಸಗಿ ಬಸ್ ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿರುವುದಾಗಿ ಸಬ್ ಇನ್ಸ್‌ಪೆಕ್ಟರ್ ಮಹದೇವನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry