ಬುಧವಾರ, ಆಗಸ್ಟ್ 21, 2019
22 °C

ಬಸ್- ಕ್ಯಾಂಟರ್ ಡಿಕ್ಕಿ 5 ಸಾವು

Published:
Updated:

ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ): ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕ್ಯಾಂಟರ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿ, 16 ಮಂದಿ ಗಾಯಗೊಂಡ ಘಟನೆ ತಾಲ್ಲೂಕಿನ ಬಿ.ಜಿ.ಕೆರೆ ಬಳಿಯ ಲಕ್ಷ್ಮಿ  ಹೈಟೆಕ್ ನರ್ಸರಿ ಎದುರು ಭಾನುವಾರ ಬೆಳಗಿನ ಜಾವ ನಡೆದಿದೆ.ಬೆಂಗಳೂರು- ಬಳ್ಳಾರಿ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಈ ಘಟನೆಯಲ್ಲಿ ನಾಲ್ವರು ಸ್ಥಳದಲ್ಲಿಯೇ ಮತ್ತು ಒಬ್ಬರು ಬಳ್ಳಾರಿಯ ವಿಮ್ಸ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಬಸ್ ಚಾಲಕ, ಗುಲ್ಬರ್ಗ ಜಿಲ್ಲೆಯ ಶಹಾಪುರದ ಲಿಂಗಪ್ಪ (53) ಮತ್ತು ಕ್ಯಾಂಟರ್‌ನಲ್ಲಿದ್ದ ತುಮಕೂರಿನ ಹನೀಫ್, ನಯಾಜ್, ಬಕ್ಷ, ಶಾನ್ ಎಂದು ಗುರುತಿಸಲಾಗಿದೆ.ಗಾಯಾಳುಗಳನ್ನು ಬಳ್ಳಾರಿಯ ವಿಮ್ಸಗೆ ದಾಖಲು ಮಾಡಲಾಗಿದೆ. ಬಸ್ ಬೆಂಗಳೂರಿನಿಂದ ಶಹಪುರಕ್ಕೆ ಹೋಗುತ್ತಿತ್ತು. ಮೀನು ತುಂಬಿಕೊಂಡಿದ್ದ ಕ್ಯಾಂಟರ್ ಮಂತ್ರಾಲಯದಿಂದ ತುಮಕೂರಿಗೆ ತೆರಳುತ್ತಿತ್ತು ಎಂದು ಪೊಲಿಸರು ತಿಳಿಸಿದ್ದಾರೆ.ಮೊಳಕಾಲ್ಮುರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post Comments (+)