ಬಸ್, ಜೀಪ್ ಡಿಕ್ಕಿ: ಇಬ್ಬರ ಸಾವು, ಆರು ಜನರಿಗೆ ಗಾಯ

7

ಬಸ್, ಜೀಪ್ ಡಿಕ್ಕಿ: ಇಬ್ಬರ ಸಾವು, ಆರು ಜನರಿಗೆ ಗಾಯ

Published:
Updated:

ಹಾನಗಲ್: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಹಾಗೂ ಪ್ರಯಾಣಿಕರಿದ್ದ ಜೀಪ್ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟು, 10 ಜನರು ಗಾಯ ಗೊಂಡ ಘಟನೆ ಬುಧವಾರ ತಾಲ್ಲೂ ಕಿನ ಚೀರನಹಳ್ಳಿ ಗ್ರಾಮದ ಸಮೀಪ ಸಂಭವಿಸಿದೆ.ಬುಧವಾರ ಬೆಳಿಗ್ಗೆ ಹಾನಗಲ್ ಘಟಕದ ಬಸ್ ಹಾನಗಲ್ಲಿನಿಂದ ಬೊಮ್ಮನಹಳ್ಳಿಗೆ ಹೊರಟಿತ್ತು, ಅದೇ ವೇಳೆಗೆ  ಪ್ರಯಾಣಿಕರನ್ನು ತುಂಬಿಸಿ ಕೊಂಡ ಜೀಪ್ ಎದುರಿನಿಂದ ಹಾನ ಗಲ್ ಕಡೆಗೆ ಪ್ರಯಾಣಿಸುತ್ತಿದ್ದಾಗ ವಾಹನಗಳ ನಡುವೆ ಡಿಕ್ಕಿ ಸಂಭವಿ ಸಿದೆ. ಈ ಘಟನೆಯಲ್ಲಿ ಹುಲ್ಲತ್ತಿ ಗ್ರಾಮದ ಜೀಪ್ ಚಾಲಕ ಸಂತೋಷ ಶಿವಣ್ಣ ಗೊಲ್ಲರ  (27) ಸ್ಥಳ ದಲ್ಲಿಯೇ ಮೃತಪಟ್ಟರು. ಗಂಭೀರ ವಾಗಿ ಗಾಯಗೊಂಡಿದ್ದ 6 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ಸಾಗಿಸಲಾಗಿದೆ.ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದ ಹಸನಾಬಾದಿ ಗ್ರಾಮದ ಬಾಬು ಸಾಬ್ ಮೋದೀನಸಾಬ್ ಮುಕ್ತೆ ಸೂರ (60) ಎಂಬಾತನ ಸ್ಥಿತಿ ಚಿಂತಾ ಜನಕವಾಗಿತ್ತು. ಈತ ಹುಬ್ಬಳ್ಳಿ  ಕಿಮ್ಸನಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಅಪಘಾತ ಸಂಭವಿಸುವ ಕ್ಷಣದಲ್ಲಿ ಒಬ್ಬ ಮಹಿಳೆ ತನ್ನ ಮಗುವಿನೊಂದಿಗೆ ಜೀಪ್‌ನಿಂದ ಹೊರಕ್ಕೆ ಜಿಗಿದಿದ್ದು, ಅದೃಶ್ಯಷ್ಟವಶಾತ್ ಅವರಿಬ್ಬರೂ ಪ್ರಾಣಾಪಾಯದಿಂದ ಪಾರಾ ಗಿದ್ದಾರೆ. ಮುಂದೆ ಹೋಗುತ್ತಿದ್ದ ಬಸ್ ಹಿಂದಿಕ್ಕಿದಾಗ ಎದುರಿನಿಂದ ಬಂದ ಬಸ್‌ಗೆ ಡಿಕ್ಕಿ ಸಂಭವಿಸಿದ್ದರಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.ಮೃತ ಯುವಕ ಸಂತೋಷ  ಹುಲ್ಲತ್ತಿ ಗ್ರಾಮ ಪಂಚಾಯತಿ ಸದಸ್ಯ ಶಿವಣ್ಣ ಗೊಲ್ಲರ ಅವರ ಪುತ್ರನಾ ಗಿದ್ದಾನೆ. ಹಾನಗಲ್ ಪಿಎಸ್‌ಐ ರಂಗನಾಥ ನೀಲಮ್ಮನವರ್, ಸಿಬ್ಬಂದಿ ಎಸ್.ಎಂ.ಪಾಲನಕರ, ಎಸ್.ಎಂ. ಬೋಗಾವಿ ಸ್ಥಳಕ್ಕೆ ಭೇಟಿ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry