`ಬಸ್ ದಿನ' ಹೆಚ್ಚುವರಿ ಬಸ್ ಸಂಚಾರ ವ್ಯವಸ್ಥೆ

7

`ಬಸ್ ದಿನ' ಹೆಚ್ಚುವರಿ ಬಸ್ ಸಂಚಾರ ವ್ಯವಸ್ಥೆ

Published:
Updated:

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬಸ್‌ದಿನದ ಅಂಗವಾಗಿ ಡಿಸೆಂಬರ್ 4 ರಂದು ನಗರದ ವಿವಿಧ ಮಾರ್ಗಗಳಿಗೆ ಹೆಚ್ಚುವರಿ ಬಸ್‌ಗಳ ಸಂಚಾರವನ್ನು ಆರಂಭಿಸಲಿದೆ.

ಹಳೇ ವಿಮಾನ ನಿಲ್ದಾಣ ರಸ್ತೆ (ಐಟಿಪಿಎಲ್), ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಥಣಿಸಂದ್ರ ರಸ್ತೆ, ಹೆಣ್ಣೂರು ರಸ್ತೆ ಮತ್ತು ಹಳೇ ಮದ್ರಾಸ್ ರಸ್ತೆಗಳಲ್ಲಿ ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ.

ಈ ಬಾರಿಯ ಬಸ್ ದಿನದ ವಿಶೇಷವಾಗಿ ಡಿ.4ರಿಂದ 31ರವರೆಗೆ ಕೆಂಪೇಗೌಡ ಬಸ್ ನಿಲ್ದಾಣದಿಂದ ನೆಲಮಂಗಲಕ್ಕೆ ನಿಯೋಜಿಸಲಾಗುತ್ತಿರುವ ವೋಲ್ವೊ ಮಾರ್ಗಸಂಖ್ಯೆ 258 ಎ ರಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಸ್ತುತ ದರದ ಮೇಲೆ ಶೇ 25 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ.

ನವೆಂಬರ್ ತಿಂಗಳ ಬಸ್ ದಿನದ ಪ್ರಯುಕ್ತ ಕೆ.ಆರ್ ಮಾರುಕಟ್ಟೆಯಿಂದ ಲಾಲ್‌ಬಾಗ್, ಡೇರಿ ವೃತ್ತ, ಬಿಳೇಕಹಳ್ಳಿ ಮಾರ್ಗವಾಗಿ ಮುತ್ತುರಾಯ ಸ್ವಾಮಿ ದೊಡ್ಡಿಗೆ ಮಾರ್ಗಸಂಖ್ಯೆ 366 ಕೆಎ, ಬನಶಂಕರಿಯಿಂದ ಜಯದೇವ ಆಸ್ಪತ್ರೆ, ಗೊಟ್ಟಿಗೆರೆ ಸಕಲವಾರ, ಬೇಗಿಹಳ್ಳಿ ಮಾರ್ಗವಾಗಿ ಜಿಗಣೆಗೆ ಮಾರ್ಗ ಸಂಖ್ಯೆ 374 ಸಿ ರಲ್ಲಿ ಹೆಚ್ಚುವರಿ ಬಸ್ ಸೇವೆ ಆರಂಭಿಸಲಾಗಿದೆ.

ಬನಶಂಕರಿಯಿಂದ ಕೋಣನಕುಂಟೆ, ಅಂಜನಾಪುರ, ಗೊಟ್ಟಿಗೆರೆ ಮಾರ್ಗವಾಗಿ ಆನೇಕಲ್‌ಗೆ ಮಾರ್ಗಸಂಖ್ಯೆ 378 ಎಫ್ ರಲ್ಲಿ, ಬಿಡದಿಯಿಂದ ಬೈರಮಂಗಲ ಕ್ರಾಸ್, ಈಗಲ್‌ಟನ್ ರೆಸಾರ್ಟ್ಸ್ ಮಾರ್ಗವಾಗಿ ಬಿಡದಿಗೆ ಫೀಡರ್ ಮಾರ್ಗ ಸಂಖ್ಯೆ 11ರಲ್ಲಿ, ಕೆಂಪೇಗೌಡ ಬಸ್ ನಿಲ್ದಾಣದಿಂದ ಹಲಸೂರು, ಕೆ.ಆರ್ ಪುರ ಮಾರ್ಗವಾಗಿ ಮಂಡೂರಿಗೆ ವೋಲ್ವೊ ಮಾರ್ಗ ಸಂಖ್ಯೆ 316 ಜಿ ರಲ್ಲಿ ಹೆಚ್ಚುವರಿ ಸಾರಿಗೆ ಸೇವೆ ಆರಂಭಿಸಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry