ಬಸ್ ನಿಲ್ದಾಣದಲ್ಲೇ ಡಿಕ್ಕಿ: ನಿರ್ವಾಹಕ ಸಾವು

7

ಬಸ್ ನಿಲ್ದಾಣದಲ್ಲೇ ಡಿಕ್ಕಿ: ನಿರ್ವಾಹಕ ಸಾವು

Published:
Updated:

ಬೆಂಗಳೂರು: ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್ ಡಿಕ್ಕಿ ಹೊಡೆದು ನಿರ್ವಾಹಕರೊಬ್ಬರು ಸಾವನ್ನಪ್ಪಿದ್ದಾರೆ.ಕೋಲಾರದ ಬೀರಪ್ಪ (38) ಮೃತಪಟ್ಟವರು. ಅವರು ಕೆಎಸ್‌ಆರ್‌ಟಿಸಿಯ ಕೋಲಾರ ಡಿಪೊದಲ್ಲಿ ಕೆಲಸ ಮಾಡುತ್ತಿದ್ದರು. ಬೇರೊಂದು ಬಸ್‌ನ ಚಾಲಕ, ಹಿಮ್ಮುಖವಾಗಿ ಬಸ್ ಚಾಲನೆ ಮಾಡುವಾಗ ವಾಹನ ತಾಗಿ ಬೀರಪ್ಪ ಕೆಳಗೆ ಬಿದ್ದಿದ್ದರು. ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು. ಬಸ್ ಚಾಲಕನನ್ನು ಬಂಧಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry