ಬಸ್ ನಿಲ್ದಾಣದಲ್ಲೇ ಹಾಸಿಗೆ ಹಿಡಿದ ಮಹಿಳೆ...!

ಶುಕ್ರವಾರ, ಜೂಲೈ 19, 2019
22 °C

ಬಸ್ ನಿಲ್ದಾಣದಲ್ಲೇ ಹಾಸಿಗೆ ಹಿಡಿದ ಮಹಿಳೆ...!

Published:
Updated:

ಲಕ್ಷ್ಮೇಶ್ವರ: ಸ್ಥಳೀಯ ಹೊಸ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಕಳೆದ 10-12 ದಿನಗಳಿಂದ ಹಾಸಿಗೆ ಹಿಡಿದು ಒಂದೇ ಜಾಗೆಯಲ್ಲಿ ಮಲಗಿದ್ದು ಯಾರೇ ಕರೆದರೂ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುತ್ತಿರುವು ದಾಗಿ ತಿಳಿದು ಬಂದಿದೆ.ನಿಲ್ದಾಣದಲ್ಲಿ ಅನಾಥವಾಗಿ ಮಲಗಿ ರುವ ಮಹಿಳೆ ಹೆಸರು ಗಿರಿಜವ್ವ ಅಂಗಡಿ (ಶೆಟ್ಟರ್) ಎಂದು ಗೊತ್ತಾಗಿದ್ದು ಆಕೆ ಸಮೀಪದ ಗೋವನಾಳ ಗ್ರಾಮದ ನಿವಾಸಿ ಎನ್ನಲಾಗಿದೆ.ಸದರಿ ಮಹಿಳೆ ಯಾವುದೋ ಸುದೀರ್ಘ ರೋಗಕ್ಕೆ ತುತ್ತಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕಾಯಿಲೆ ಯಿಂದ ಬಳಲುತ್ತಿರುವ ಈ ಮಹಿಳೆ ಯನ್ನು ಆರೈಕೆ ಮಾಡುವವರು ಯಾರೂ ಇಲ್ಲದ್ದರಿಂದ ಅವಳು ನರಳುತ್ತಾ ಹಾಸಿಗೆ ಹಿಡಿದಿರುವುದನ್ನು ಕಂಡ ನಿಲ್ದಾಣಕ್ಕೆ ಬರುವ ನೂರಾರು ಜನರು ಮರಗುತ್ತಿದ್ದಾರೆ.ಮಹಿಳೆ ಮಲಗಿದಲ್ಲಿಯೇ ಮಲಗಿರುವುದರಿಂದ ಗಬ್ಬು ವಾಸನೆ ಬರುವ ಸಂಭವವಿದೆ. ಸಾವಿರಾರು ಜನರು ಓಡಾಡುವ ಸ್ಥಳವಾಗಿರುವ ನಿಲ್ದಾಣದಲ್ಲಿ ಇದು ಕಿರಿಕಿರಿ ಉಂಟು ಮಾಡಿದೆ.ಮಹಿಳೆ ಸುತ್ತಲೂ ಬುಳುಸುಗಟ್ಟಿದ ಬ್ರೆಡ್ ತುಂಡುಗಳುಮ ಬಿಸ್ಕಿಟ್ ಪಾಕೀಟು, ನೀರಿನ ಬಾಟಲಿಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ಈ ಕಡೆಗೆ ಸಮಾಜ ಕಲ್ಯಾಣ ಇಲಾಖೆ ಆಗಲಿ, ಸ್ಥಳೀಯ  ಸರ್ಕಾರಿ ಆಸ್ತ್ರತ್ರೆಯವರಾಗಲಿ ಅಥವಾ ನಿಲ್ದಾಣದ ಅಧಿಕಾರಿಗಳಾಗಲಿ ಈ ಮಹಿಳೆ ಆರೋಗ್ಯದ ಕುರಿತು ವಿಚಾರಿಸದೇ ಇರುವುದು ಕಳವಳಕ್ಕೆ ಕಾರಣವಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry