ಬಸ್ ನಿಲ್ದಾಣ ದುರಸ್ತಿ ಆರಂಭ

7

ಬಸ್ ನಿಲ್ದಾಣ ದುರಸ್ತಿ ಆರಂಭ

Published:
Updated:
ಕೃಷ್ಣರಾಜಪುರ:  ಹಲವಾರು ವರ್ಷಗಳಿಂದ ದುರಸ್ತಿ ಕಾಣದೇ ಅವ್ಯವಸ್ಥೆಯ  ಅಗರವಾಗಿದ್ದ ಸ್ಥಳೀಯ ಬಿಎಂಟಿಸಿ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ  ಇತ್ತೀಚೆಗೆ ಚಾಲನೆ ನೀಡಲಾಗಿದೆ.

ನಿಲ್ದಾಣದಲ್ಲಿ ಜಲ್ಲಿ ಕಲ್ಲು ಹಾಕಿ ಸಮತಟ್ಟು ಮಾಡುವ ಕೆಲಸ ಆರಂಭವಾಗಿದ್ದು, ಸದ್ಯದಲ್ಲೇ ಕಾಂಕ್ರಿಟ್ ಹಾಕಲಾಗುವುದು ಎಂದು ಬಿಎಂಟಿಸಿ ಅಧಿಕಾರಿ ಜಗನ್ನಾಥ್ ತಿಳಿಸಿದರು.

‘ಈಗಾಗಲೇ ಸಂಸ್ಥೆಯ ಹಿರಿಯ ಅಧಿಕಾರಿಗಳು ಈ ನಿಲ್ದಾಣಕ್ಕೆ ಭೇಟಿ ನೀಡಿ  ಪರಿಶೀಲಿಸಿದ್ದಾರೆ. ಪ್ರಯಾಣಿಕರ ಜತೆಗೂ ಚರ್ಚೆ ನಡೆಸಿದ್ದಾರೆ. ನಿತ್ಯ ನೂರಾರು ಬಸ್ಸುಗಳು ಇಲ್ಲಿ ಬಂದು ಹೋಗುವುದರಿಂದ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಚಿಂತನೆ ನಡೆದಿದೆ’ ಎಂದು ಅವರು ಹೇಳಿದರು.

ಬಸ್ ನಿಲ್ದಾಣದ ಅವ್ಯವಸ್ಥೆ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಇತ್ತೀಚೆಗೆ ಚಿತ್ರ ಸಹಿತ ವರದಿ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೃಷ್ಣರಾಜಪುರ ಬಿಎಂಟಿಸಿ ಬಸ್ ನಿಲ್ದಾಣವು ಕೆಸರು ಗುಂಡಿಯಂತಾಗಿರುವುದು   (ಎಡ ಚಿತ್ರ). ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ಇತ್ತೀಚೆಗೆ ಚಾಲನೆ ನೀಡಲಾಗಿದೆ (ಬಲ ಚಿತ್ರ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry