ಬಸ್ ಮಾರ್ಗ ಬದಲಾಯಿಸಿ

7

ಬಸ್ ಮಾರ್ಗ ಬದಲಾಯಿಸಿ

Published:
Updated:

ವಿದ್ಯಾರಣ್ಯಪುರದಿಂದ ಜಾಲಹಳ್ಳಿ ಕ್ರಾಸ್‌ಗೆ ಎರಡು ಬಸ್‌ಗಳು ಬಿಸಿ-8 ಹಾಗೂ 248ಡಿ ಒಂದೇ ಮಾರ್ಗದಲ್ಲಿ ಅಂದರೆ ಬಿಇಎಲ್ ಸರ್ಕಲ್, ಗಂಗಮ್ಮ ಸರ್ಕಲ್, ಕೆ.ಜಿ. ಹಳ್ಳಿ ಮಾರ್ಗವಾಗಿ ಸಂಚರಿಸುತ್ತಾ ಇರುವುದು ಸರಿಯಷ್ಟೆ. ಬಿಇಎಲ್ ಸರ್ಕಲ್‌ನಿಂದ ಜಾಲಹಳ್ಳಿ ಕ್ರಾಸ್‌ಗೆ ಈ ಮಾರ್ಗದಲ್ಲಿ ಬೇರೆ ಬಸ್‌ಗಳು ಲಭ್ಯವಿದೆ (273,275, ಸೀರೀಸ್).

ವಿದ್ಯಾರಣ್ಯಪುರ ಹಾಗೂ ಯಲಹಂಕದಿಂದ ನಿತ್ಯ ನೂರಾರು ಪ್ರಯಾಣಿಕರು ಗೋವರ್ಧನ್, ಆರ್‌ಎಂಸಿ ಯಾರ್ಡ್, ಗೊರಗುಂಟೆಪಾಳ್ಯ ಕಡೆ ಪ್ರಯಾಣಿಸುತ್ತಿದ್ದೇವೆ. ಆದರೆ ಯಶವಂತಪುರದಲ್ಲಿ ಇಳಿದು ಪುನಃ ಅಲ್ಲಿಂದ ಮತ್ತೊಂದು ಬಸ್ ಹಿಡಿದು ಕಚೇರಿ ತಲುಪುವಷ್ಟರಲ್ಲಿ ತುಂಬಾ ತಡವಾಗುತ್ತದೆ.

ಈ ಸಂಬಂಧ ತಮ್ಮಲ್ಲಿ ಕೇಳಿಕೊಳ್ಳುವುದು ಏನೆಂದರೆ, ದಯಮಾಡಿ ಮೇಲೆ ಹೇಳಿದ ಎರಡು ಬಸ್‌ಗಳಲ್ಲಿ ಯಾವುದಾದರೂ ಒಂದು ಬಸ್‌ನ ಮಾರ್ಗವನ್ನು ಬದಲಾಯಿಸಿ ಬಿಇಎಲ್ ಸರ್ಕಲ್, ಮತ್ತಿಕೆರೆ, ಯಶವಂತಪುರ, ಗೋವರ್ಧನ, ಆರ್‌ಎಂಸಿ ಯಾರ್ಡ್-ಗೊರಗುಂಟೆಪಾಳ್ಯ- ಜಾಲಹಳ್ಳಿ ಕ್ರಾಸ್ ಮಾರ್ಗವಾಗಿ ಸಂಚರಿಸುವಂತೆ ಮಾಡಿದರೆ ಅನುಕೂಲವಾಗುತ್ತದೆ. ನಮ್ಮ ಈ ಮನವಿಗೆ ಬಿಎಂಟಿಸಿ ಸ್ಪಂದಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry