ಭಾನುವಾರ, ಜನವರಿ 26, 2020
23 °C

ಬಸ್ ಮಾರ್ಗ ಬದಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾರಣ್ಯಪುರದಿಂದ ಜಾಲಹಳ್ಳಿ ಕ್ರಾಸ್‌ಗೆ ಎರಡು ಬಸ್‌ಗಳು ಬಿಸಿ-8 ಹಾಗೂ 248ಡಿ ಒಂದೇ ಮಾರ್ಗದಲ್ಲಿ ಸಂಚರಿಸುತ್ತವೆ. (ಬಿಇಎಲ್ ಸರ್ಕಲ್, ಗಂಗಮ್ಮ ಸರ್ಕಲ್, ಕೆ.ಜಿ.ಹಳ್ಳಿ ಮಾರ್ಗವಾಗಿ).  ಬಿಇಎಲ್ ಸರ್ಕಲ್‌ನಿಂದ ಜಾಲಹಳ್ಳಿ ಕ್ರಾಸ್‌ಗೆ ಈ ಮಾರ್ಗದಲ್ಲಿ ಬೇರೆ ಬಸ್‌ಗಳೂ ಲಭ್ಯವಿದೆ (273, 275, ಸಿರೀಸ್).ವಿದ್ಯಾರಣ್ಯಪುರ ಹಾಗೂ ಯಲಹಂಕದಿಂದ ನಿತ್ಯ ನೂರಾರು ಪ್ರಯಾಣಿಕರು ಗೋವರ್ಧನ್, ಆರ್‌ಎಂಸಿ ಯಾರ್ಡ್, ಗೊರಗುಂಟೆಪಾಳ್ಯ ಕಡೆ ಪ್ರಯಾಣಿಸುತ್ತಿದ್ದೇವೆ. ಆದರೆ ಯಶವಂತಪುರದಲ್ಲಿ ಇಳಿದು ಪುನಃ ಅಲ್ಲಿಂದ ಮತ್ತೊಂದು ಬಸ್ ಹಿಡಿದು ಕಚೇರಿ ತಲುಪುವಷ್ಟರಲ್ಲಿ ವಿಳಂಬವಾಗುತ್ತಿದೆ.ಬಿಎಂಟಿಸಿ ಅಧಿಕಾರಿಗಳು ದಯಮಾಡಿ ಬಿಇಎಲ್ ಸರ್ಕಲ್, ಮತ್ತಿಕೆರೆ, ಯಶವಂತಪುರ, ಗೋವರ್ಧನ, ಆರ್‌ಎಂಸಿ ಯಾರ್ಡ್- ಗೊರಗುಂಟೆಪಾಳ್ಯ- ಜಾಲಹಳ್ಳಿ ಕ್ರಾಸ್ ಮಾರ್ಗವಾಗಿ ಹೊಸ ಬಸ್ ಸಂಚಾರ ಆರಂಭಿಸಲು ಕೋರಲಾಗುತ್ತದೆ. ಇದು ಇಲಾಖೆಗೆ ಹೊರೆ ಆಗುವಂತಿದ್ದರೆ,  ಮೇಲೆ ಹೇಳಿದ ಎರಡು ಬಸ್‌ಗಳಲ್ಲಿ ಯಾವುದಾದರೂ ಒಂದು ಬಸ್‌ನ ಮಾರ್ಗ ಬದಲಿಸಲು ಕೋರಲಾಗುತ್ತದೆ. 

 

ಪ್ರತಿಕ್ರಿಯಿಸಿ (+)