ಶನಿವಾರ, ಆಗಸ್ಟ್ 24, 2019
23 °C

ಬಸ್ ಸಂಚಾರಕ್ಕೆ ಅನುವು ಮಾಡಿಕೊಡಿ

Published:
Updated:

ವರ್ತೂರು ಸಮೀಪದ ಸೋರುಹುಣಸೆಯಿಂದ ವಾಲೇಪುರ ಸಂಪರ್ಕಿಸುವ ರಸ್ತೆಯ ಸುಮಾರು ಅರ್ಧ ಕಿಲೋಮೀಟರ್‌ನಷ್ಟು ಭಾಗ ಸಂಪೂರ್ಣವಾಗಿ ಹದಗೆಟ್ಟಿದೆ. ಇದರಿಂದಾಗಿ ವಾಹನ ಸಂಚಾರ ದುಸ್ತರಗೊಂಡಿದೆ. ಬೆಂ.ಮ.ನ.ಸಾ.ಸಂಸ್ಥೆಯು ಈ ಮಾರ್ಗದಲ್ಲಿ ಚಲಿಸಲು ಎರಡು ವಾಹನಗಳಿಗೆ ಇತ್ತೀಚೆಗೆ ಮಂಜೂರಾತಿ ನೀಡಿತ್ತು.ಆದರೆ, ರಸ್ತೆ ಸರಿಯಿಲ್ಲವೆಂಬ ಕಾರಣಕ್ಕೆ ಸಂಸ್ಥೆಯವರು ಬಸ್‌ಗಳನ್ನು ಇನ್ನೂ ರಸ್ತೆಗೆ ಇಳಿಸಿಲ್ಲ. ಈ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವುದು ತುಂಬಾ ಕಷ್ಟ. ರಸ್ತೆಯ ದುಸ್ಥಿತಿ ಬಗ್ಗೆ ಪಾಲಿಕೆ ಸದಸ್ಯರು ಮತ್ತು ಮಹದೇವಪುರ ಕ್ಷೇತ್ರದ ಶಾಸಕರಿಗೆ ತಿಳಿದಿದ್ದರೂ ಅವರು ಜಾಣಮೌನ ಪ್ರದರ್ಶಿಸುತ್ತಿದ್ದಾರೆ. ಆದ್ದರಿಂದ, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ರಸ್ತೆಯನ್ನು ಸರಿಪಡಿಸಲು ಗಮನಹರಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬೇಕು.

 

Post Comments (+)