ಬಸ್ ಸಂಚಾರ ಹೆಚ್ಚಿಸಿ

7

ಬಸ್ ಸಂಚಾರ ಹೆಚ್ಚಿಸಿ

Published:
Updated:

ವಿದ್ಯಾರಣ್ಯಪುರದಿಂದ ಜಾಲಹಳ್ಳಿ ವೃತ್ತದವರೆಗೆ ರೂಟ್ ನಂ. ಎಂಟು ಸಿ ಬೆಳಿಗ್ಗೆ ಎಂಟು ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಸಂಚರಿಸುತ್ತದೆ. ಪ್ರತಿ ಅರ್ಧ ಗಂಟೆಗೊಂದರಂತೆ ದೊಡ್ಡಬೊಮ್ಮಸಂದ್ರ, ಬಿ.ಇ.ಎಲ್ ವೃತ್ತ, ಎಚ್.ಎಂ.ಟಿ. ಆಡಿಟೋರಿಯಂ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮಾರ್ಗ ಈ ಬಸ್ಸಿನದು. ಇದರಿಂದ ವಿದ್ಯಾರಣ್ಯಪುರದ ಜನರಿಗೆ ತುಂಬಾ ಅನುಕೂಲವಾಗಿದೆ.ಆದರೆ ಕಚೇರಿ ಹಾಗೂ ಕಾಲೇಜಿಗೆ ಹೋಗುವವರಿಗೆ  ಐದು ಗಂಟೆಯ ನಂತರವೇ ಬಸ್ಸಿನ ಅನುಕೂಲದ ಅಗತ್ಯವಿದೆ.  ಆಗ ಎಂಟು ಸಿ ಬಸ್ ಸಂಚಾರ ಇರುವುದಿಲ್ಲ. ಇದರಿಂದಾಗಿ ಪ್ರತಿ ನಿತ್ಯ ಪ್ರಯಾಣಿಸುವ ಸರ್ಕಾರಿ ಉದ್ಯೋಗಿಗಳಿಗೆ, ಉದ್ಯೋಗಸ್ಥ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ.ಆದರೆ, ಸಾಯಂಕಾಲ ಆರು ಗಂಟೆಯ ಮೇಲೆ ಬಿ.ಇ.ಎಲ್. ವೃತ್ತದಲ್ಲಿ ಸಾಕಷ್ಟು ಅಂದರೆ ಸುಮಾರು ಎರಡರಿಂದ ಮೂರು ಬಸ್ ಹಿಡಿಯುವಷ್ಟು ಜನ ಇರುತ್ತಾರೆ. ಮೆಜೆಸ್ಟಿಕ್‌ನಿಂದ ಹಾಗೂ ಯಲಹಂಕಕ್ಕೆ ಹೋಗುವ ಎಲ್ಲಾ ಬಸ್‌ಗಳೂ ತುಂಬಿರುತ್ತವೆ. ಆದ್ದರಿಂದ ತಾವು ನಮ್ಮ ಮನವಿಗೆ ಸ್ಪಂದಿಸಿ ರೂಟ್ ನಂ. ಎಂಟು ಸಿ ಬಸ್ಸನ್ನು ರಾತ್ರಿ ಒಂಬತ್ತು ಗಂಟೆಯವರೆಗೆ ವಿಸ್ತರಿಸಿದರೆ ವಿದ್ಯಾರಣ್ಯಪುರದ ಸಮಸ್ತ ಜನರಿಗೆ ಪ್ರಯೋಜನವಾಗುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry