ಶನಿವಾರ, ಮೇ 15, 2021
25 °C

ಬಸ್ ಸಂಪರ್ಕ ಒದಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಂಬೂಸವಾರಿ ದಿಣ್ಣೆ ಬಸ್ ನಿಲ್ದಾಣದಿಂದ ದಿನನಿತ್ಯ ಹಲವಾರು ಬಸ್ಸುಗಳು ಕೆಂಪೇಗೌಡ ಬಸ್ ನಿಲ್ದಾಣ, ಕೃ.ರಾ. ಮಾರುಕಟ್ಟೆ, ಶಿವಾಜಿನಗರದ ಕಡೆಗೆ ಪುಟ್ಟೇನಹಳ್ಳಿ ಮಾರ್ಗವಾಗಿ ಜೆ.ಪಿ.ನಗರ ಜಯನಗರದ ಕಡೆಗೆ ಸಂಚರಿಸುತ್ತಿರುತ್ತವೆ. ಸುರಭಿನಗರ, ನಾಯಕ್ ಲೇಔಟ್, ವೆಂಟೇಶ್ವರ ಲೇಔಟ್, ಬಿ.ಡಿ.ಎ. ಲೇಔಟ್ ಹಾಗೂ ಕೊತ್ತನೂರು ದಿಣ್ಣೆಯ ನಿವಾಸಿಗಳು ಬನ್ನೇರುಘಟ್ಟ ರಸ್ತೆಯ ಮೀನಾಕ್ಷಿ ದೇವಾಲಯ, ಹುಳಿಮಾವಿನ ಕಡೆಗೆ ಹಾಗೂ ಕಾಳೇನ ಅಗ್ರಹಾರ, ಗೊಟ್ಟಿಗೆರೆಯ ಕಡೆಗೆ ಹೋಗುವ ಉದ್ಯೋಗಸ್ಥರಿಗೆ, ವ್ಯಾಪಾರಸ್ಥರಿಗೆ ವಿದ್ಯಾರ್ಥಿಗಳಿಗೆ ಬಸ್ಸಿನ ನೇರ ಸೌಕರ್ಯವಿಲ್ಲ. ಹೀಗಾಗಿ ಜಂಬೂಸವಾರಿ ದಿಣ್ಣೆಯಿಂದ ಸಂಚರಿಸುವ ಬಸ್ಸುಗಳಲ್ಲಿ ಸಂಚರಿಸಿ ನಂತರ ಮತ್ತೊಂದು ಬಸ್ಸಿನಲ್ಲಿ ಪ್ರಯಾಣಿಸಬೇಕಾಗಿದೆ. ಆದ್ದರಿಂದ ಕೆಲವು ಬಸ್ಸುಗಳನ್ನು ಜಂಬೂಸವಾರಿ ದಿಣ್ಣೆಯಿಂದ ಬಿ.ಕೆ. ಸರ್ಕಲ್ ಮಾರ್ಗವಾಗಿ ವೆಂಕಟೇಶ್ವರ ಲೇಔಟ್ ಕಡೆಯಿಂದ ಲೊಯಲೋ ಶಾಲೆಯ ಕಡೆಗೋ ಸಂಚರಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಬಸ್ಸುಗಳ ಏರ್ಪಾಟು ಮಾಡಲು ಮನವಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.