ಶನಿವಾರ, ಏಪ್ರಿಲ್ 17, 2021
27 °C

ಬಸ್ ಸೌಲಭ್ಯಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಗ್ಗಾಂವ: ತಾಲ್ಲೂಕಿನ ಹೊತ್ನಹಳ್ಳಿ ಗ್ರಾಮಕ್ಕೆ ಸಾರಿಗೆ ಸಂಸ್ಥೆ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ನೂರಾರು ಸಾರ್ವಜನಿಕರು, ವಿದ್ಯಾರ್ಥಿಗಳು ಸುಮಾರು ಎರಡು ಗಂಟೆಗಳ ಕಾಲ ರಸ್ತೆ ಸಂಚಾರ ಬಂದ್ ಮಾಡುವ ಮೂಲಕ ಶುಕ್ರವಾರ ಪ್ರತಿಭಟನೆ ನಡೆಸಿದರು.ಸುಮಾರು 2-3 ತಿಂಗಳಿಂದ ಹೊತ್ನಹಳ್ಳಿ ಮಾರ್ಗವಾಗಿ ಸಂಚರಿಸುವ ಸವಣೂರ-ಯಳ್ಳೂರ ಹಾಗೂ ಬಂಕಾಪೂರ ಬೊಮ್ಮಹಳ್ಳಿ ಬಸ್‌ಗಳು ಸರಿಯಾಗಿ ಸಂಚರಿಸುವುದಿಲ್ಲ. ಆದ್ದರಿಂದ ಹತ್ತಿರದ ನಗರಗಳಾದ ಹಾವೇರಿ, ಶಿಗ್ಗಾಂವ, ಹಾನಗಲ್ ಹಾಗೂ ಬಂಕಾಪುರಕ್ಕೆ ಇಲ್ಲಿನ ವ್ಯಾಪಾರಸ್ಥರು, ರೈತರು ಹಾಗೂ ಶಾಲಾ ಕಾಲೇಜುಗಳಿಗೆ ನಿತ್ಯ ಸಂಚರಿಸುವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ದೂರಿದರು.ಸುಮಾರು ಮೂರು ತಿಂಗಳ ಹಿಂದೆ ನಡೆದ ಜನಸ್ಪಂದನಾ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಎರಡು ಬಸ್‌ಗಳನ್ನು ಹೆಚ್ಚುವರಿಯಾಗಿ ಈ ಮಾರ್ಗದಲ್ಲಿ ಸಂಚರಿಸಲು ಆವಕಾಶ ಕಲ್ಪಿಸಬೇಕು ಎಂದು ಆಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಆದರೆ ಅಧಿಕಾರಿಗಳು ಸಚಿವರ ಆದೇಶವನ್ನು ಗಾಳಿಗೆ ತೂರಿ ಮನಬಂದಂತೆ ವರ್ತಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಜಿ.ಪಂ. ಸದಸ್ಯ ಶಶಿಧರ ಹೊನ್ನಣ್ಣವರ ಹಾಗೂ ಹಾನಗಲ್-ಸವಣೂರ ಸಾರಿಗೆ ಸಂಸ್ಥೆ ಘಟಕದ ವ್ಯವಸ್ಥಾಪಕ ಸ್ಥಳಕ್ಕೆ ಭೇಟಿ ನೀಡಿ ಸದ್ಯದಲ್ಲಿ ಬಸ್ ಸೌಕರ್ಯ ಸುಗಮಗೊಳಿಸುವುದಾಗಿ ಹೇಳಿದರು. ಆಗ ಪ್ರತಿಭಟನಾಕಾರರು ಪ್ರತಿಭಟನೆ ಹಿಂದೆ ಪಡೆದರು. ಮಾ. 24ರೊಳಗೆ  ಸಮಸ್ಯೆ ಈಡೇರದಿದ್ದರೆ ರಾಜ್ಯ ಹೆದ್ದಾರಿ ಬಂದ್ ಮಾಡುವ ಮೂಲಕ ಉಗ್ರ ಪ್ರತಿಭಟನೆ ಹಮ್ಮಿಕೊಳುವುದಾಗಿ  ಎಚ್ಚರಿಕೆ ನೀಡಿದರು.   ಗ್ರಪಂ ಅಧ್ಯಕ್ಷ ಅಶೋಕ ಗುಳೇದ, ನಿಂಗನಗೌಡ್ರ ಪಾಟೀಲ, ಜಗದೀಶ ಸವಣೂರ, ಆರ್.ಸಿ. ಬಾಪೂಜಿ ಶಿವರಾಜ ಮತ್ತಿಗಟ್ಟಿ, ನಾಗರಾಜ ಬೆಳವತ್ತಿ, ಜಗದೀಶ ಗುಳೇದ, ನಾಗಯ್ಯ ಹಿರೇಮಠ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.