ಭಾನುವಾರ, ಆಗಸ್ಟ್ 18, 2019
24 °C

ಬಸ್ ಸೌಲಭ್ಯಕ್ಕೆ ವಿದ್ಯಾರ್ಥಿಗಳ ಪ್ರತಿಭಟನೆ

Published:
Updated:

ಚಿಂಚೋಳಿ: ತಾಲ್ಲೂಕಿನ ರಾಣಾಪುರ ಕ್ರಾಸ್‌ನಿಂದ ಚಿಂಚೋಳಿವರೆಗೆ ಬೆಳಿಗ್ಗೆ 8.30ಕ್ಕೆ ಹಾಗೂ ಸಂಜೆ 5 ಗಂಟೆಗೆ ಚಿಂಚೋಳಿಯಿಂದ ರಾಣಾಪುರ ಕ್ರಾಸ್‌ವರೆಗೆ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಈ ಭಾಗದ ಗ್ರಾಮಗಳ ಮಕ್ಕಳು ಸಾರಿಗೆ ಸಂಸ್ಥೆಯ ಬಸ್ ಘಟಕದ ಎದುರು ಪ್ರತಿಭಟನೆ ನಡೆಸಿ ಶುಕ್ರವಾರ ಘಟಕ ವ್ಯವಸ್ಥಾಪಕರಿಗೆ ಲಿಖಿತ ಮನವಿ ಸಲ್ಲಿಸಿದರು. ಈ ಹಿಂದೆ ಫೆಬ್ರುವರಿ, ಹಾಗೂ ಜೂನ್ ತಿಂಗಳಲ್ಲಿ ಎರಡು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದರೆ ಈಗ ಬಸ್ ಸೌಲಭ್ಯ ಕಲ್ಪಿಸುವುದಾಗಿ ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ ಎಂದು ಸಂಗಾರೆಡ್ಡಿ ಮತ್ತು ಹೈದರ್ ಅಲಿ ತಿಳಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಘಟಕ ವ್ಯವಸ್ಥಾಪಕ ಧೂಳಪ್ಪನವರು ಬಸ್ ಸಂಚಾರ ಆರಂಭಿಸುವುದಾಗಿ ಭರವಸೆ ನೀಡಿದರು. ವಿಜಯಭರತ ಬಸಂತಪೂರಕರ್, ಹೈದರ್ ಅಲಿ, ಸಂಗಾರೆಡ್ಡಿ, ಮೋದಿನಸಾಬ್ ಇದ್ದರು

Post Comments (+)