ಶುಕ್ರವಾರ, ಮೇ 27, 2022
22 °C

ಬಸ್ ಸೌಲಭ್ಯ: ವಿದ್ಯಾರ್ಥಿಗಳ ಮುಷ್ಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಬಾದ: ತಾಲ್ಲೂಕಿನ ದೇವನತೆಗನೂರ, ಧರ್ಮಾಪೂರ, ಮರತೂರ ಗ್ರಾಮಗಳ ವಿದ್ಯಾರ್ಥಿಗಳಿಗೆ ಸಾರಿಗೆ ಇಲಾಖೆ ಸೂಕ್ತ ಬಸ್ ಸೌಕರ್ಯ ಒದಗಿಸಿಕೊಡುವಂತೆ ಆಗ್ರಹಿಸಿ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಮಂಗಳವಾರ ಇಲ್ಲಿನ ಬಸ್‌ನಿಲ್ದಾಣದಲ್ಲಿ ಮಿಂಚಿನ ಮುಷ್ಕರ ನಡೆಸಿದರು. ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ಮುಖಂಡರಾದ ನಿಂಗಣ್ಣ ಜಂಬಗಿ, ಸಿದ್ದು ಚೌಧರಿ ನೇತೃತ್ವ ವಹಿಸಿದ್ದರು.ಗುಲ್ಬರ್ಗ-ಶಹಾಬಾದ ಮಧ್ಯದ ರಸ್ತೆ ದುರಸ್ತಿ ಕಾರಣ ನೀಡಿ ಬಸ್‌ಗಳು ಮುಗಳಾನಾಗಾಂವ ಹಾಗೂ ನಂದೂರ ಮೂಲಕ ಚಲಿಸುತ್ತಿವೆ. ಈ ಮಧ್ಯೆ ಬೇರೆ ಖಾಸಗಿ ವಾಹನಗಳು ವಿದ್ಯಾರ್ಥಿಗಳನ್ನು ಹತ್ತಿರವೂ ಸೇರಿಸದಿರುವುದು ತೀವ್ರ ತೊಂದರೆಯಾಗಿದೆ. ಬಸ್‌ಪಾಸ್ ಹೊಂದಿರುವ ಶಾಲಾ, ಕಾಲೇಜು ವಿದ್ಯಾರ್ಥಿಗಳು ಮುಂಗಡ ಹಣ ನೀಡಿದ್ದರೂ ಬಸ್‌ಗಳ ಅನುಕೂಲವಿಲ್ಲ. ತಕ್ಷಣದಿಂದ ಈ ಗ್ರಾಮಗಳ ಮುಖಾಂತರ ಬಸ್ ಒಡಾಡುವಂತೆ ಕ್ರಮ ಕೈಗೊಳ್ಳವಂತೆ ಒತ್ತಾಯಿಸಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಭರವಸೆ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು. ಮುಷ್ಕರದಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಗ್ರಾಮ ಪಂಚಾಯಿತಿ ಸದಸ್ಯ ಪರಶುರಾಮ ನಿಂಬಾಳಕರ್, ವಿಜಯಕುಮಾರ ಮುಗಳಿ, ಸೂರ್ಯಕಾಂತ, ಲೋಹಿತ, ಮಲ್ಲಿಕಾರ್ಜುನ, ಶಿವು, ರಾಯಪ್ಪ, ರವಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.