ಗುರುವಾರ , ನವೆಂಬರ್ 21, 2019
22 °C

`ಬಹದ್ದೂರ್' ಸಂಚಾರ

Published:
Updated:

ಲೆಜೆಂಡ್ ಇಂಟರ್ ನ್ಯಾಷನಲ್ ಗ್ರೂಪ್ ಸಂಸ್ಥೆ  ನಿರ್ಮಿಸುತ್ತಿರುವ `ಬಹದ್ದೂರ್' ಚಿತ್ರದ ನಾಯಕ ಧ್ರುವಸರ್ಜಾ. ರಾಧಿಕಾ ಪಂಡಿತ್ ನಾಯಕಿ.ಕೆಲವು ಚಿತ್ರಗಳಿಗೆ ಹಾಡುಗಳನ್ನು ಬರೆದಿರುವ ಚೇತನ್‌ಕುಮಾರ್ ಈ ಚಿತ್ರದ ನಿರ್ದೇಶಕ. ಇದು ಅವರ ಮೊದಲ ಸಿನಿಮಾ. ಚಿತ್ರಕ್ಕಾಗಿ ಬೆಂಗಳೂರಿನ ಸುತ್ತಮುತ್ತ ನಿರಂತರವಾಗಿ ಚಿತ್ರೀಕರಣ ನಡೆಯುತ್ತಿದೆ. ಅರ್ಜುನ್‌ಜನ್ಯ ಸಂಗೀತವಿರುವ ಈ ಚಿತ್ರಕ್ಕೆ ಶ್ರಿಶ ಕುದುವಳ್ಳಿ ಛಾಯಾಗ್ರಹಣವಿದೆ. ರವಿವರ್ಮ ಸಾಹಸ ನಿರ್ದೇಶನ, ರವಿ ಸಂತೆಹಕ್ಲು ಕಲಾ ನಿರ್ದೇಶನ ಹಾಗೂ ಎ.ಹರ್ಷ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ  ಚಿತ್ರಕ್ಕಿದೆ.

 

ಪ್ರತಿಕ್ರಿಯಿಸಿ (+)