ಬಹರೇನ್‌ನಲ್ಲಿ ಇಂದು `ಕನ್ನಡ ವೈಭವ'

7

ಬಹರೇನ್‌ನಲ್ಲಿ ಇಂದು `ಕನ್ನಡ ವೈಭವ'

Published:
Updated:

ಮನಾಮ (ಬಹರೇನ್):  `ಬಹರೇನ್ ಕನ್ನಡ ಸಂಘ'  ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ದ್ವೀಪ ದೇಶದ ರಾಷ್ಟ್ರೀಯ ದಿನದಂದು ಸಾರಲು `ಕನ್ನಡ ವೈಭವ - 2012'ನ್ನು ಸ್ಥಳೀಯ ಮರೀನ ಕ್ಲಬ್ ಸಮೀಪದ `ಸಾಂಸ್ಕೃತಿಕ ಸಭಾಂಗಣ'ದಲ್ಲಿ  ಡಿ.16 ರಂದು ಸಂಜೆ 5.30ಕ್ಕೆ ಹಮ್ಮಿಕೊಂಡಿದೆ.ಉನ್ನತ ಶಿಕ್ಷಣ ಖಾತೆ ಸಚಿವರಾದ ಸಿ.ಟಿ.ರವಿ ಮತ್ತು ಬೆಂಗಳೂರಿನ ಯು.ಎಲ್.ಬಿ. ಸಂಸ್ಥೆಯ ಮುಖ್ಯಸ್ಥ ಪ್ರದೀಪ್ ಕುಮಾರ್  ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಖ್ಯಾತ ನಟ ದಿಗಂತ್, ಖ್ಯಾತ ನಟಿ ಐಂದ್ರಿತಾ ರೇ ಅವರು ಭಾಗವಹಿಸಲಿದ್ದಾರೆ.ಬೆಂಗಳೂರಿನ ಖ್ಯಾತ ಯುವ ಗಾಯಕ ಚಿನ್ಮಯ್ ಮತ್ತು ತಂಡದಿಂದ ರಸಮಂಜರಿ, ಅಶೋಕ್ ಪೊಳಲಿ ಅವರಿಂದ ಗೊಂಬೆ ನೃತ್ಯ ನಡೆಯಲಿದೆ ಎಂದು ಕನ್ನಡ ಸಂಘ ಅಧ್ಯಕ್ಷ ರಾಜ್ ಕುಮಾರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry