ಬಹರೇನ್ ಸುಧಾರಣೆಗೆ ಬೆಂಬಲ

7

ಬಹರೇನ್ ಸುಧಾರಣೆಗೆ ಬೆಂಬಲ

Published:
Updated:

  ವಾಷಿಂಗ್ಟನ್ (ಪಿಟಿಐ): ಬಹರೇನ್‌ನಲ್ಲಿ ಅರ್ಥಪೂರ್ಣವಾದ ಸುಧಾರಣೆಯಾಗಬೇಕು ಮತ್ತು ಮಾನವ ಹಕ್ಕುಗಳಿಗೆ ಗೌರವ ದೊರಕುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಅಮೆರಿಕ ಬಯಸಿದೆ.ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಟಾಮ್ ಡೊನಿಲನ್ ಅವರು ಬಹರೇನ್‌ನ ಯುವರಾಜ ಸಲ್ಮಾನ್ ಬಿನ್ ಇಸಾ ಅಲ್-ಖಲೀಫಾ ಅವರ ಜತೆ ಮಾತನಾಡಿ ಅಮೆರಕದ ಅಭಿಪ್ರಾಯವನ್ನು ತಿಳಿಸಿದ್ದಾರೆ.ಅಧ್ಯಕ್ಷ ಬರಾಕ್ ಒಬಾಮ ಭಾನುವಾರ ಬಹರೇನ್‌ನ ದೊರೆ ಹಮದ್ ಬಿನ್ ಇಸಾ ಅಲ್-ಖಲೀಫಾ ಜತೆ ಮಾತನಾಡಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಬಲ ಪ್ರಯೋಗ ಮಾಡಿದ್ದನ್ನು ಖಂಡಿಸಿದ್ದಾರೆ. ಸಮಾಜದ ಎಲ್ಲಾ ವರ್ಗಗಳ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಲು ಮುಂದಾಗಿರುವ ಯುವರಾಜ ಸಲ್ಮಾನ್ ಅವರ ಕ್ರಮವನ್ನು ಡೊನಿಲನ್ ಶ್ಲಾಘಿಸಿದ್ದಾರೆ. ಜನತೆಯ ಬಹುದಿನಗಳ ಆಶೋತ್ತರ ಪೂರೈಸಲು ರಾಜಕೀಯ ಸುಧಾರಣೆಯೇ ಸರಿಯಾದ ಮಾರ್ಗ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry