ಭಾನುವಾರ, ಏಪ್ರಿಲ್ 18, 2021
29 °C

ಬಹಿಷ್ಕಾರ ಆರೋಪ: ಶರಣರ ಪಾಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ಸವರ್ಣೀಯರು ದಲಿತರಿಗೆ ಬಹಿಷ್ಕಾರ ಹಾಕಿದ್ದಾರೆ ಎಂಬ ಘಟನೆ ಹಿನ್ನೆಲೆಯಲ್ಲಿ ಎರಡು ಸಮುದಾಯಗಳ ನಡುವೆ ವ್ಯತ್ಯಾಸಕ್ಕೆ ಕಾರಣವಾಗಿದ್ದ ಹಿರಿಯೂರು ತಾಲ್ಲೂಕಿನ ಕುಂದಲಗುರ ಗ್ರಾಮದ ಮಜರೆ ಶಿವನಗರದಲ್ಲಿ ಬುಧವಾರ ಸಂಜೆ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು, ಮಾರ್ಕಾಂಡಮುನಿ ಸ್ವಾಮೀಜಿ, ಷಡಕ್ಷರಮುನಿ ಸ್ವಾಮೀಜಿ ನೇತೃತ್ವದಲ್ಲಿ ಎರಡೂ ಸಮುದಾಯಗಳ ಮುಖಂಡರು ಪಾದಯಾತ್ರೆ ನಡೆಸಿದರು.ಪಾದಯಾತ್ರೆಯ ನಂತರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಾಲಕೃಷ್ಣ,   ದಲಿತರಿಗೆ ಯಾವುದೇ ರೀತಿಯ ಸಾಮಾಜಿಕ ಬಹಿಷ್ಕಾರ ಹಾಕಿಲ್ಲ. ಜಾತಿ ನಿಂದನೆ ಮಾಡಿಲ್ಲ. ದೌರ್ಜನ್ಯ ಎಸಗಿಲ್ಲ. ಇಲ್ಲಿನ ರೈತರಿಗೆ ನಾಲ್ಕು ಎಕರೆ ಭೂಮಿ ಇದೆ. ಮಳೆ ಇಲ್ಲದ ಕಾರಣ ನಾವೇ ಕೆಲಸ ಮಾಡಿಕೊಳ್ಳುತ್ತಿದ್ದೇವೆ. ಹೀಗಾಗಿ ಕೂಲಿಗೆ ಕರೆಯುತ್ತಿಲ್ಲ ಎನ್ನುವುದು ಸರಿಯಲ್ಲ. ಪೊಲೀಸರು 9 ಜನರ ಮೇಲೆ  ಪ್ರಕರಣ ದಾಖಲು ಮಾಡಿದ್ದಾರೆ ಎಂದರು.ದಲಿತ ಮುಖಂಡ ನಾಗರಾಜ್ ಮಾತನಾಡಿ, ಸಹಾಯಕಿ ಹುದ್ದೆಗೆ ಅರ್ಜಿ ಹಾಕಿದ್ದು ತನ್ನ ಪತ್ನಿ. ಅದನ್ನು ಒಕ್ಕಲಿಗರಿಗೆ ಬಿಟ್ಟುಕೊಡಿ, ನೀವು ಅರ್ಜಿ ಹಾಕಿದ್ದು ತಪ್ಪು. ಅರ್ಜಿಯನ್ನು ವಾಪಸ್ ತೆಗೆದುಕೊಂಡಿದ್ದೇನೆ ಎಂದು ಬರೆದು ಕೊಡು ಎಂದು ಹಲ್ಲೆ ಮಾಡಲು ಬಂದಿದ್ದರು ಎಂದು ಆರೋಪಿಸಿದರು.ದಲಿತ ಮುಖಂಡ ಟಿ.ಡಿ. ರಾಜಗಿರಿ ಮಾತನಾಡಿ, ಜಾತಿ ನಿಂದನೆ ಮಾಡಿರುವುದೂ ನಿಜ. ಆದರೆ, ನಾವ್ಯಾರೂ ಪೊಲೀಸರಿಗೆ ಜಾತಿನಿಂದನೆ, ದಲಿತರ ಮೇಲೆ ದೌರ್ಜನ್ಯ, ಅಸ್ಪೃಶ್ಯತೆ  ಕುರಿತು ಕೇಸುಕೊಟ್ಟಿಲ್ಲ ಎಂದರು.

ಷಡಕ್ಷರಮುನಿ ಸ್ವಾಮೀಜಿ ಮಾತನಾಡಿ,  ಅಸ್ಪೃಶ್ಯತೆ  ಆಚರಣೆ ನಾಗರಿಕ ಸಮಾಜ ತಲೆ ತಗ್ಗಿಸುವ ಕೃತ್ಯ. ಅನ್ಯಾಯವಾಗಿದ್ದರೆ ಕಾನೂನಿನ ಮೊರೆ ಹೋಗಬೇಕು ಎಂದರು.ಮಾರ್ಕಾಂಡಮುನಿ ಸ್ವಾಮೀಜಿ ಮಾತನಾಡಿ, ಅವಘಡಗಳಿಗೆ ಆಸ್ಪದ ಕೊಡುವುದು ಬೇಡ ಎಂದು ತಿಳಿಸಿದರು.

ನೇತೃತ್ವ ವಹಿಸಿ ಮಾತನಾಡಿದ  ಶಿವಮೂರ್ತಿ  ಶರಣರು, ಜಾತಿಗಳ ನಡುವೆ ಸಾಮರಸ್ಯವಿರಲಿ. ಶಿವನಗರ ಸಾಮರಸ್ಯಕ್ಕೆ ಹೆಸರಾಗಲಿ. ಉಭಯತ್ರರೂ ಅನ್ಯೋನ್ಯವಾಗಿದ್ದಾರೆ ಎಂದು ತೋರಿಸುವ ಕೆಲಸ ನಡೆಯಲಿ   ಎಂದು ಹೇಳಿ, ಎರಡೂ ಕಡೆಯವರನ್ನು ಸೇರಿಸಿ ಒಟ್ಟಿಗೆ ಬದುಕುತ್ತೇವೆ ಎಂದು ಪ್ರಮಾಣ ವಚನ ಬೋಧಿಸಿದರು.ತಾ.ಪಂ. ಸದಸ್ಯ ಮಹಮದ್ ಫಕೃದ್ದೀನ್, ಹುಚ್ಚವ್ವನಹಳ್ಳಿ ವೆಂಕಟೇಶ್, ಗುರುಶ್ಯಾಮಯ್ಯ, ಚಿಕ್ಕಣ್ಣ, ಗಣೇಶ್, ರಂಗಸ್ವಾಮಿ, ಪ್ರಕಾಶ್, ಬಂಡಿ ಮಲ್ಲೇಶ್, ಷಣ್ಮುಖಪ್ಪ, ಶೇಷಣ್ಣಕುಮಾರ್, ರಾಮು, ವಿಶ್ವನಾಥ್, ಷಣ್ಮುಖಪ್ಪ ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.