ಬಹುದಿನದ ಬೇಡಿಕೆ ಈಡೇರಿಸಿದ ಸರ್ಕಾರ

7
ಜಿಲ್ಲೆಗೆ ಮೂರು ತಾಲ್ಲೂಕು ಕೊಡುಗೆ: ಜನರ ಹರ್ಷ

ಬಹುದಿನದ ಬೇಡಿಕೆ ಈಡೇರಿಸಿದ ಸರ್ಕಾರ

Published:
Updated:
ಬಹುದಿನದ ಬೇಡಿಕೆ ಈಡೇರಿಸಿದ ಸರ್ಕಾರ

ಯಾದಗಿರಿ: ವಿಧಾನಸಭೆಯಲ್ಲಿ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಜಿಲ್ಲೆಗೆ ಮೂರು ತಾಲ್ಲೂಕುಗಳ ಕೊಡುಗೆ ನೀಡುವ ಮೂಲಕ ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದಂತಾಗಿದೆ. ಬಜೆಟ್‌ನಲ್ಲಿ ತಾಲ್ಲೂಕು ಕೇಂದ್ರಗಳ ಘೋಷಣೆ ಆಗುತ್ತಿದ್ದಂತೆಯೇ ವಿಜಯೋತ್ಸವ, ಸಂಭ್ರಮಾಚರಣೆಗಳು ಮುಗಿಲು ಮುಟ್ಟಿದವು.ಜಿಲ್ಲೆಯ ಗುರುಮಠಕಲ್, ಹುಣಸಗಿ ಹಾಗೂ ವಡಗೇರಾ ತಾಲ್ಲೂಕುಗಳನ್ನು ರಚನೆ ಮಾಡಲಾಗಿದೆ. ಆದರೆ ಕೆಂಭಾವಿಯನ್ನು ಕೈಬಿಟ್ಟಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.ವಿಜಯೋತ್ಸವ: ಜಿಲ್ಲೆಯ ಗುರುಮಠಕಲ್ ವಡಗೇರಾ, ಹುಣಸಗಿ ತಾಲ್ಲೂಕುಗಳನ್ನು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ನಗರದ ಸುಭಾಷಚಂದ್ರ ಬೋಸ್ ವೃತ್ತದಲ್ಲಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.ಈ ಸಂದರ್ಭದಲ್ಲಿ ವಡಗೇರಾ ತಾಲ್ಲೂಕು ಹೋರಾಟ ಸಮಿತಿ ಸಂಚಾಲಕ ಡಾ. ಗಾಳೆಪ್ಪ ಪೂಜಾರಿ, ಜೆಡಿಎಸ್ ಮುಖಂಡ ಶ್ರೀನಿವಾಸರಡ್ಡಿ ಚನ್ನೂರ, ನಿಂಗು ಜಡಿ, ಮಲ್ಲಣ್ಣ ಐಕೂರ, ದೇವು ಪೂಜಾರಿ, ಮಲ್ಲಿಕಾರ್ಜುನ ಕರಿಕಳ್ಳಿ, ಸಾಬರಡ್ಡಿ ಇಟಗಿ, ವಿಜಯಕುಮಾರ ಪಾಟೀಲ, ಮಹಾಂತೇಶ ಸಂಟ್ರಿ, ರವಿ ಬಾಡಿಯಾಳ, ಬಾಬು ಶಿವಪೂರ, ಮಂಜುನಾಥ ಹೂಗಾರ, ಬಸವರಾಜ ಕಿರದಳ್ಳಿ, ದೇವಿಂದ್ರ, ಕಿರಣ ನಂದೇಪಲ್ಲಿ, ಸಂಗನಗೌಡ ಕೊಡೆಕಲ್ ಮುಂತಾದವರು ಭಾಗವಹಿಸಿದ್ದರು. ವಡಗೇರಾದಲ್ಲಿ ವಿಜಯೋತ್ಸವ: 

ತಾಲ್ಲೂಕು ಕೇಂದ್ರವಾಗಿ ಘೋಷಣೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕರು, ವಿವಿಧ ಸಂಘಟನೆಗಳು, ರಾಜಕೀಯ ಮುಖಂಡರು ಸಮೀಪದ ವಡಗೇರಾದ ಹೊನ್ನಯ್ಯ ತಾತಾನವರ ದೇವಸ್ಥಾನದ ಆವರಣದಲ್ಲಿ ಸಂಭ್ರಮಾಚರಣೆ ಮಾಡಿದರು. ಮೆರವಣಿಗೆ ಮೂಲಕ ಗ್ರಾಂದ ಮಹಾದ್ವಾರಕ್ಕೆ ಬಂದು ರಾಜ್ಯ ಸರ್ಕಾರದ ಪರ ಘೋಷಣೆ ಕೂಗಿದರು.ಪರಸ್ಪರ ಸಿಹಿ ತಿನ್ನಿಸಿ, ಸಿಡಿಮದ್ದು ಸಿಡಿಸಿ, ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು. ಗ್ರಾಮದ ಹಿರಿಯರಾದ ಬಸವರಾಜಪ್ಪ ಸಾಹು, ಜೆಡಿಎಸ್ ಮುಖಂಡರಾದ ಶ್ರೀನಿವಾಸರಡ್ಡಿ ಚೆನ್ನೂರ, ಬಸವರಾಜ ಕಾಡಂನೋರ, ಮಲ್ಲಯ್ಯ ಮುಸ್ತಾಜೀರ, ಮೈನೋದ್ದೀನ್, ಹಣಮಂತ್ರಾಯ ಜಡಿ, ಶರಣು ಮಾತಪಳ್ಳಿ, ಹೊನ್ನಪ್ಪ ಕಡೇಚೂರ, ರಡ್ಡೆಪ್ಪ ಜಡಿ, ಗೌರಿಶಂಕರ, ಮಲ್ಲಪ್ಪ ಪಿಡ್ಡೆಗೌಡ, ಕರವೇ ಹೋಬಳಿ ಅಧ್ಯಕ್ಷ ಶಿವುಕುಮಾರ ಕೊಂಕಲ್, ವಿದ್ಯಾಥಿ ಘಟಕದ ಅಧ್ಯಕ್ಷ ಅಜ್ಮೀರ ಬಾಷಾ, ಗ್ರಾಮಸ್ಥರು ಇದ್ದರು.ವಡಗೇರಾ ತಾಲ್ಲೂಕು ಕ್ರೇಂದ್ರಕ್ಕಾಗಿ ಹೋರಾಟ ಮಾಡಿದ ಗ್ರಾಮದ ಬಸವರಾಜಪ್ಪ ಸಾಹು, ಸಿದ್ದಣ್ಣ ಕಾಡಂನೋರ, ಚಾಂದಪಾಷಾ, ಬಸವರಾಜಪ್ಪ ಮಾಲಿಪಾಟೀಲ, ಸಾಯಬಣ್ಣ ಸಿದ್ದಿ, ಗೋವಿಂದ ಬೊಜ್ಜಿ, ಮೆಹಬೂಬ ನಾಯಿಕೊಡಿ, ಅಶೋಕ ಕರಣಗಿ, ಲಿಂಗರಾಜ ಕೊಡಂಗಲ್, ಮರೆಪ್ಪ, ಹಣಮಂತ್ರಾಯ ಜಡಿ ಇನ್ನುಳಿದ ಮುಖಂಡರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.ಸಂಭ್ರಮದಲ್ಲಿ ಜನತೆ: ಶಹಾಪುರ ತಾಲ್ಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರ ವಡಗೇರಾವನ್ನು ರಾಜ್ಯ ಸರ್ಕಾರ ನೂತನ ತಾಲ್ಲೂಕು ಕೇಂದ್ರವನ್ನು ಘೋಷಣೆ ಮಾಡಿದ್ದರಿಂದ ವಡಗೇರಾದ ವಿವಿಧ ಪಕ್ಷಗಳ ಮುಖಂಡರು, ಸಂಘ-ಸಂಸ್ಥೆಗಳು, ವಡಗೇರಾ ಸುತ್ತಲಿನ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ವಡಗೇರಾ ವ್ಯಾಪ್ತಿಯ ಬೆಂಡೆಬೆಂಬಳಿ, ಬಿಳ್ಹಾರ, ತುಮಕೂರ, ಕೊಂಕಲ್, ಚೆನ್ನೂರ, ಗೊಂದಡಿಗಿ, ಹಯ್ಯೊಳ, ಬೀರನೂರ, ಹಾಲಗೇರಾ, ಉಳ್ಳೆಸುಗೂರ, ಅರ್ಜುಣಿಗಿ, ಕದ್ರಾಪೂರ, ಜೋಳದಡಿಗಿ, ಇಟಗಿ, ರೋಟ್ನಡಿಗಿ, ಶಿವಪುರ, ಕೊಡಾಲ್, ಗೋನಾಲ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಗ್ರಾಮಗಳು ಒಳಗೊಂಡಿದೆ. ವಡಗೇರಾ ತಾಲ್ಲೂಕು ಕೇಂದ್ರವನ್ನಾಗಿಸಲು ಗ್ರಾಮಸ್ಥರು ಪಕ್ಷ-ಭೇದ ಮರೆತು ಹಲವು ಬಾರಿ ಹೋರಾಟಗಳು, ಪ್ರತಿಭಟನೆಗಳು ನಡೆಸಿದ್ದವು. ವಡಗೇರಾ ತಾಲ್ಲೂಕು ಕೇಂದ್ರ ಘೋಷಣೆಯಾಗುತ್ತಿದ್ದಂತೆ ಜನತೆ ಪಟಾಕಿ ಸಿಡಿಸಿ ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು.ಜನರ ಬೇಡಿಕೆಯನ್ನು ಈಡೇರಿಸುವ ಮೂಲಕ ರಾಜ್ಯ ಸರ್ಕಾರ ಬಹುದೊಡ್ಡ ಕೊಡುಗೆ ನೀಡಿದಂತಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜಪ್ಪಗೌಡ ಪೊಲೀಸ್‌ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯೆ ಪಾರ್ವತಮ್ಮ ಕಾಡಂನೋರ್, ಸಿದ್ದಣ್ಣಗೌಡ ಕಾಡಂನೋರ್, ತಾಲ್ಲೂಕು ಪಂಚಾಯಿತಿ ಸದಸ್ಯ ಇಟಗಿ, ತಮಸ ಜಿಲ್ಲಾ ಘಟಕದ ಅಧ್ಯಕ್ಷ ಬಾಷುಮಿಯಾ ವಡಗೇರಾ, ಬಸವರಾಜ ನೀಲಹಳ್ಳಿ, ಗೌರಿಶಂಕರ ಹಿರೇಮಠ, ಈರಣ್ಣ ಕುಂಬಾರ, ಅಬ್ದುಲ್ ಚಿಗಾನೂರ, ಮಹ್ಮದ್ ಕುರೇಶಿ, ಅಬ್ದುಲ್ ಖದರ್, ಅಜ್ಮೀರ್ ಇನ್ನೂ ಹಲವಾರು ಜನರು ಹರ್ಷ ವ್ಯಕ್ತಪಡಿಸಿದ್ದಾರೆ.ಗುರುಮಠಕಲ್ ವರದಿ:  ಗುರುಮಠಕಲ್ ತಾಲ್ಲೂಕು ಘೋಷಣೆಗೆ ಬಿಜೆಪಿ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.

ಪಟ್ಟಣದ ಪಕ್ಷದ ಕಚೇರಿಯಿಂದ ಬೈಕ್ ರ‌್ಯಾಲಿ ಮೂಲಕ ಮೆರವಣಿಗೆ ಸಾಗಿ, ಪಟಾಕಿ ಸಿಡಿಸಿ, ಪರಸ್ಪರ ಅಭಿನಂದನೆ ಸಲ್ಲಿಸಿದರು. ಮನೆ-ಮನೆಗಳಿಗೆ ತೆರಳಿ ಸಿಹಿ ತಿಂಡಿ ಹಂಚಿ ಸಂಭ್ರಮ ಆಚರಿಸಿದರು.ಖಾಸಾಮಠಕ್ಕೆ ತೆರಳಿ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದ ಗುಲ್ಬರ್ಗ ಕಾಡಾ ಅಧ್ಯಕ್ಷ ಗಿರೀಶ ಮಟ್ಟೆಣ್ಣವರ್ ಮಾತನಾಡಿ,  ಮುಖ್ಯಮಂತ್ರಿ ಜಗದೀಶ ಶೆಟ್ಟರ, ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹಾಗೂ ತಾಲ್ಲೂಕು ರಚನೆಗಾಗಿ ಹೋರಾಟ ಮಾಡಿದ ಎಲ್ಲರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.ಬಿಜೆಪಿ ಸರ್ಕಾರ ಉತ್ತಮ ರೈತ ಪರ, ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ತಾನು ಸದಾ ಅಭಿವೃದ್ಧಿ ಪರ ಇದೆ ಎಂಬುದನ್ನು ಬಜೆಟ್ ಮೂಲಕ ತೋರಿಸಿ ಕೊಟ್ಟಿದೆ. ಇದನ್ನು ಜನರಿಗೆ ಜನರಿಗೆ ತಲುಪಿಸಿವಂತೆ ಕಾರ್ಯಕರ್ತರಿಗೆ  ಸಲಹೆ   ನೀಡಿದರು.ಮತಕ್ಷೇತ್ರ ಘಟಕದ ಅಧ್ಯಕ್ಷ ಕೃಷ್ಣರೆಡ್ಡಿ ಪಾಟೀಲ, ಮಲ್ಲೇಶಪ್ಪ ಬೇಲಿ, ಕೆ.ದೇವದಾಸ, ಭೀಮಾಶಂಕರ ಪಡಿಗಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.ಗುರುಮಠಕಲ್ ತಾಲ್ಲೂಕು ರಚನೆಗೆ ವಿವಿಧ ಸಂಘ-ಸಂಸ್ಥೆಗಳು ಹರ್ಷ ವ್ಯಕ್ತಪಡಿಸಿವೆ. ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಭೀಮಾಶಂಕರ ಮುತ್ತಿಗಿ, ಚುಟುಕು ಸಾಹಿತ್ಯ ಅಧ್ಯಕ್ಷ ಎಂ.ಬಿ. ನಾಯಕಿನ, ಹಿರಿಯ ನಾಗರಿಕ ಸಂಘ ಅಧ್ಯಕ್ಷ ಬಸವರಾಜ ಬೂದಿ, ಸಿದ್ದಣ್ಣ ಗೋಗಿ, ಹೈದರಾಬಾದ ಕರ್ನಾಟಕ ಹೋರಾಟ ಸಂಘದ ಜಿಲ್ಲಾ ಸಂಚಾಲಕ ಸಿದ್ದಲಿಂಗರೆಡ್ಡಿ ಕಂದಕೂರು, ಮಲ್ಲಿಕಾರ್ಜುನ ಅರುಣಿ ಮುಂತಾದವರು ಹರ್ಷ ವ್ಯಕ್ತಪಡಿಸಿದರು.ಬಿಜೆಪಿ ಹರ್ಷ: ಯಾದಗಿರಿಯನ್ನು ಜಿಲ್ಲೆಯನ್ನಾಗಿ ಘೋಷಿಸಿದ ಬಿಜೆಪಿ ನೇತೃತ್ವದ ಸರ್ಕಾರ ಈಗ ಜಿಲ್ಲೆಯ ಬಹುದಿನಗಳ ಬೇಡಿಕೆಗಳಾದ ಗುರುಮಠಕಲ್, ವಡಗೇರಾ ಹಾಗೂ ಹುಣಸಗಿಗಳನ್ನು ತಾಲ್ಲೂಕು ಕೇಂದ್ರಗಳನ್ನಾಗಿ ಮಾಡಿದ್ದು ಅತ್ಯಂತ ಸಂತಸದ ವಿಷಯ ಎಂದು ಬಿಜೆಪಿ ಜಿಲ್ಲಾ ಘಟಕದ ಹೇಳಿದೆ.ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರನ್ನು ಅಭಿನಂದಿಸಿದ್ದು, ಗುರಮಠಕಲ್, ಹುಣಸಗಿ, ವಡಗೇರಾ ವಲಯದ ಕಾರ್ಯಕರ್ತರು ವಿಜಯೋತ್ಸವ ಆಚರಿಸುತ್ತಿರುವುದು ಸಂಭ್ರಮದ ವಾತಾವರಣ ನೆಲೆಸಲು ಕಾರಣವಾಗಿದೆ ಎಂದು ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ನೀಲಕಂಠರಾಯ ಯಲ್ಹೇರಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry