ಬಹುಭಾಷಾ ಕಲಿಕೆಯಿಂದ ಬೌದ್ಧಿಕಮಟ್ಟ ಹೆಚ್ಚಳ

7

ಬಹುಭಾಷಾ ಕಲಿಕೆಯಿಂದ ಬೌದ್ಧಿಕಮಟ್ಟ ಹೆಚ್ಚಳ

Published:
Updated:

ಹೊಳಲ್ಕೆರೆ: ಮಾತೃಭಾಷೆಯೊಂದಿಗೆ ಇತರ ಭಾಷೆಗಳನ್ನು ಕಲಿಯುವುದರಿಂದ ಬೌದ್ಧಿಕಮಟ್ಟ ಹೆಚ್ಚುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ರಾಘವೇಂದ್ರ ಪಾಟೀಲ ಹೇಳಿದರು.

ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದ ರಾಘವೇಂದ್ರ ಬಿ.ಇಡಿ ಕಾಲೇಜಿನಲ್ಲಿ ಈಚೆಗೆ ನಡೆದ ಆಂಗ್ಲಭಾಷಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಾತೃಭಾಷೆಯಲ್ಲಿ ಪಕ್ವತೆ ಹೊಂದಿದ ನಂತರ ಇತರ ಭಾಷೆಗಳನ್ನು ಕಲಿಯುವುದರಿಂದ ಹೆಚ್ಚು ಜ್ಞಾನ ಹೊಂದಬಹುದು. ಬೇರೆ ಭಾಷೆಯಲ್ಲಿನ ಸಾರವನ್ನು ನಮ್ಮ ಭಾಷೆಗೆ ತರಲು ಇದು ಸಹಕಾರಿಯಾಗುತ್ತದೆ. ಇಂದಿನ ದಿನಗಳಲ್ಲಿ ಶಿಕ್ಷಕರಿಗಂತೂ ಇಂಗ್ಲಿಷ್ ಕಲಿಕೆ ಅನಿವಾರ್ಯವಾಗಿದೆ ಎಂದರು.ಆಂಗ್ಲಭಾಷಾ ಉಪನ್ಯಾಸಕ ಕೆ.ಆರ್. ಶಂಕರ ಪ್ರಸಾದ್ ಮಾತನಾಡಿ, ಯಾವುದೇ ಭಾಷೆ ಕಲಿಯುವುದು ಮುಖ್ಯವಲ್ಲ. ಅದನ್ನು ನಿರಂತರವಾಗಿ ಬಳಸುವುದರಿಂದ ಮಾತ್ರ ಹಿಡಿತ ಸಾಧಿಸಬಹುದು ಎಂದರು.ಪ್ರಾಂಶುಪಾಲ ಎಸ್. ರವಿಶಂಕರ್ ಅಧ್ಯಕ್ಷತೆ ವಹಿಸಿದ್ದರು.ಸಂಪನ್ಮೂಲ ಉಪನ್ಯಾಸಕ ಎಚ್.ಎಂ. ಸೋಮಶೇಖರ್, ಧನಂಜಯ, ಶಂಕರ್, ಸಂತೋಷ್ ಕುಮಾರ್ ಹಾಗೂ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.ಸಂಗೊಳ್ಳಿ ರಾಯಣ್ಣ ಸಂಘದಿಂದ ದೇಣಿಗೆ: ಗ್ರಾಮದ ಸಂಗೊಳ್ಳಿ ರಾಯಣ್ಣ ಯುವಕ ಸಂಘದಿಂದ ಆಶ್ರಮದ ರಾಘವೇಂದ್ರ ಸ್ವಾಮೀಜಿ ಬೃಂದಾವನ ನಿರ್ಮಾಣಕ್ಕೆ ರೂ 5 ಸಾವಿರ ದೇಣಿಗೆ ನೀಡಲಾಯಿತು. ಆಡಳತಾಧಿಕಾರಿ ರಾಘವೇಂದ್ರ ಪಾಟೀಲರು ಇಲ್ಲಿಯೇ ಇದ್ದು ಆಶ್ರಮವನ್ನು ನೋಡಿಕೊಳ್ಳಬೇಕು ಎಂದು ಸಂಘದ ಸದಸ್ಯರು ಮನವಿ ಮಾಡಿದರು.ಸಹಾಯಕ ಆಡಳಿತಾಧಿಕಾರಿ ಕೆ.ಡಿ. ಬಡಿಗೇರ, ಎಲ್.ಎಸ್. ಶಿವರಾಮಯ್ಯ, ಮಂಜುನಾಥ, ಚಿಕ್ಕಪ್ಪ, ಉಮೇಶ, ರವಿ, ರಂಗನಾಥ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry