ಬಹುಮಾನಕ್ಕೆ ಕೃತಿ ಆಹ್ವಾನ

7

ಬಹುಮಾನಕ್ಕೆ ಕೃತಿ ಆಹ್ವಾನ

Published:
Updated:

ಶಿವಮೊಗ್ಗ: ಇಲ್ಲಿನ ಕರ್ನಾಟಕ ಸಂಘವು 2011ನೇ ಸಾಲಿನಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಬಹುಮಾನ ನೀಡಲು ಲೇಖಕರು ಮತ್ತು ಪ್ರಕಾಶಕರಿಂದ ಕೃತಿಗಳನ್ನು ಆಹ್ವಾನಿಸಿದೆ.ಮರು ಮುದ್ರಣಗೊಂಡ ಕೃತಿ ಮತ್ತು ಹಸ್ತಪ್ರತಿಗಳಿಗೆ ಅವಕಾಶ ಇಲ್ಲ. ಈ ಹಿಂದೆ ಬಹುಮಾನ ಪಡೆದವರು ಮತ್ತೊಮ್ಮೆ  ಭಾಗವಹಿಸುವಂತಿಲ್ಲ.ಕಾದಂಬರಿಗೆ ಕುವೆಂಪು, ಅನುವಾದಿತ ಕೃತಿಗೆ ಎಸ್.ವಿ. ಪರಮೇಶ್ವರ ಭಟ್ಟ, ಮಹಿಳಾ ಸಾಹಿತ್ಯಕ್ಕೆ ಎಂ.ಕೆ. ಇಂದಿರಾ, ಮುಸ್ಲಿಂ ಬರಹಗಾರರ ಕೃತಿಗಳಿಗೆ ಪಿ. ಲಂಕೇಶ್, ಕವನ ಸಂಕಲನ ಡಾ.ಜಿ.ಎಸ್. ಶಿವರುದ್ರಪ್ಪ, ಅಂಕಣ ಬರಹಗಾರರಿಗೆ ಡಾ.ಹಾ.ಮಾ. ನಾಯಕ, ಸಣ್ಣ ಕಥಾಸಂಕಲನ ಡಾ.ಯು.ಆರ್. ಅನಂತಮೂರ್ತಿ, ನಾಟಕ ಕೃತಿಗೆ ಕೆ.ವಿ. ಸುಬ್ಬಣ್ಣ, ಪ್ರವಾಸ ಸಾಹಿತ್ಯಕ್ಕೆ ಕುಕ್ಕೆ ಸುಬ್ರಹ್ಮಣ್ಯಶಾಸ್ತ್ರಿ, ವಿಜ್ಞಾನ ಸಾಹಿತ್ಯಕ್ಕೆ ಹಸೂಡಿ ವೆಂಕಟಶಾಸ್ತ್ರಿ, ಮಕ್ಕಳ ಸಾಹಿತ್ಯಕ್ಕೆ ನಾ.ಡಿಸೋಜ ಹಾಗೂ ವೈದ್ಯ ಸಾಹಿತ್ಯಕ್ಕೆ ಡಾ.ಎಚ್.ಡಿ. ಚಂದ್ರಪ್ಪಗೌಡ ಪ್ರಶಸ್ತಿ ನೀಡಲಾಗುವುದು.ಆಸಕ್ತರು ಈ ಪ್ರಕಾರಗಳ ಸಾಹಿತ್ಯ ಕೃತಿಗಳ ಮೂರು ಪ್ರತಿಗಳನ್ನು ಗೌರವ ಕಾರ್ಯದರ್ಶಿ, ಕರ್ನಾಟಕ ಸಂಘ, ಬಿ.ಎಚ್. ರಸ್ತೆ, ಶಿವಮೊಗ್ಗ-577201. ಇಲ್ಲಿಗೆ ಮಾರ್ಚ್ 31ರ ಒಳಗೆ ಕಳುಹಿಸಬೇಕು. ಆಯ್ಕೆಯಾದ ಕೃತಿಗಳಿಗೆ ಐದು ಸಾವಿರ ರೂ. ನಗದು ಮತ್ತು ಬಹುಮಾನ ಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ದೂ: 08182- 277406 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry