ಶನಿವಾರ, ಮೇ 15, 2021
24 °C

ಬಹುಮಾನ: ಕನ್ನಡ ಕೃತಿಗಳ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪುಸ್ತಕ ಬಹುಮಾನ ನೀಡಲು ವಿವಿಧ ಪ್ರಕಾರಗಳ ಕನ್ನಡ ಕೃತಿಗಳನ್ನು ಆಹ್ವಾನಿಸಿದೆ.ಬಹುಮಾನಕ್ಕಾಗಿ ಸಲ್ಲಿಸುವ  ಕೃತಿಗಳು 2012ರ ಜನವರಿ 1ರಿಂದ 2012ರ ಡಿಸೆಂಬರ್ 31ರೊಳಗೆ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರಬೇಕು ಹಾಗೂ  ಕೃತಿಯ ತಾಂತ್ರಿಕ ಪುಟದಲ್ಲಿ ಪ್ರಥಮ ಮುದ್ರಣ 2012 ಎಂದು ಮುದ್ರಿತವಾಗಿರಬೇಕು.ಕಾವ್ಯ (ವಚನಗಳು ಮತ್ತು ಹನಿಗವನಗಳು ಸೇರಿ), ಕಾದಂಬರಿ, ಸಣ್ಣಕತೆ, ನಾಟಕ, ಲಲಿತ ಪ್ರಬಂಧ (ಹರಟೆ ಮತ್ತು ವಿನೋದ ಸಾಹಿತ್ಯ ಸೇರಿ), ಪ್ರವಾಸ ಸಾಹಿತ್ಯ, ಜೀವನ ಚರಿತ್ರೆ ,ಆತ್ಮಕಥೆ, ಸಾಹಿತ್ಯ ವಿಮರ್ಶೆ (ಸಾಹಿತ್ಯ ಚರಿತ್ರೆ, ಸಾಹಿತ್ಯ ತತ್ವ ಮತ್ತು ಸೌಂದರ್ಯ ಮೀಮಾಂಸೆ ಸೇರಿ), ಗ್ರಂಥ ಸಂಪಾದನೆ, ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ(ಭೌತ, ರಸಾಯನ, ಗಣಿತ, ಪ್ರಾಣಿ, ಸಸ್ಯ, ಇಂಜಿನಿಯರಿಂಗ್, ವೈದ್ಯ, ಭೂ, ಖಗೋಳ, ಗೃಹವಿಜ್ಞಾನ, ಪರಿಸರ ಇತ್ಯಾದಿ), ಮಾನವಿಕಗಳು (ಇತಿಹಾಸ, ರಾಜಕೀಯ ಶಾಸ್ತ್ರ, ಸಮಾಜಸಾಸ್ತ್ರ, ಮಾನವಶಾಸ್ತ್ರ, ಮನ:ಶಾಸ್ತ್ರ, ಭಾಷಾಶಾಸ್ತ್ರ, ಶಿಕ್ಷಣ, ವಾಣಿಜ್ಯ, ಕಾನೂನು, ಗ್ರಂಥಭಂಡಾರ ವಿಜ್ಞಾನ, ಸಮೂಹ ಸಂವಹನ, ಧಾರ್ಮಿಕ, ದಾರ್ಶನಿಕ), ಸಂಶೋಧನೆ (ಕನ್ನಡ ಭಾಷೆ ಮತ್ತು ಸಂಸ್ಕೃತಿಗಳಿಗೆ ಸಂಬಂಧಿಸಿದ), ಅನುವಾದ-1(ಕಾದಂಬರಿ, ಕಾವ್ಯ, ಸಣ್ಣಕತೆ, ನಾಟಕ, ಲಲಿತಪ್ರಬಂಧ, ಪ್ರವಾಸ ಸಾಹಿತ್ಯ, ಜೀವನಚರಿತ್ರೆ ಮತ್ತಿತರ ಸೃಜನಶೀಲ ಕೃತಿಗಳು), ಅನುವಾದ-2 (ಶಾಸ್ತ್ರ ಸಾಹಿತ್ಯ, ಸಾಹಿತ್ಯ ವಿಮರ್ಶೆ-ಇತ್ಯಾದಿ ಸೃಜನೇತರ ಕೃತಿಗಳು), ಸಂಕೀರ್ಣ (ಯಾವುದೇ ಪ್ರಕಾರಕ್ಕೆ ಹೊಂದಿಕೊಳ್ಳದ ವಿಶಿಷ್ಠ ಕೃತಿಗಳು) ಪ್ರಕಾರಗಳಲ್ಲಿರುವ ಕೃತಿಗಳು ಹಾಗೂ ಲೇಖಕರ ಮೊದಲ ಸ್ವತಂತ್ರ ಕೃತಿ, ಕನ್ನಡದಿಂದ ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿರುವ ಉತ್ತಮ ಸೃಜನಾತ್ಮಕ ಕೃತಿಗಳನ್ನು ಬಹುಮಾನಕ್ಕಾಗಿ ಆಯ್ಕೆ ಮಾಡಲಾಗುವುದು.ಬಹುಮಾನಕ್ಕಾಗಿ ಸಲ್ಲಿಸುವ ಪುಸ್ತಕದ ಶೀರ್ಷಿಕೆ ಪುಟದಲ್ಲಿ ಕೃತಿ ಯಾವ ಪ್ರಕಾರಕ್ಕೆ ಸೇರಿದೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಿರಬೇಕು.

ಮರುಮುದ್ರಣ, ಜಾನಪದ, ಪದವಿಗಾಗಿ ಸಿದ್ಧಪಡಿಸಿದ ಸಂಶೋಧನಾ ಗ್ರಂಥ, ಪಠ್ಯಪುಸ್ತಕ, ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ, ಸಾಹಿತ್ಯ ಅಕಾಡೆಮಿಯಿಂದ ಈಗಾಗಲೇ ಮೂರು ಬಾರಿ ಪುಸ್ತಕ ಬಹುಮಾನ ಪಡೆದವರ ಹಾಗೂ ಒಂದೇ ಪ್ರಕಾರದಲ್ಲಿ ಎರಡು ಬಾರಿ ಪುಸ್ತಕ ಬಹುಮಾನ ಪಡೆದು ಮತ್ತದೇ ಪ್ರಕಾರದ ಕೃತಿಗಳನ್ನು ಬಹುಮಾನಕ್ಕೆ ಪರಿಗಣಿಸಲಾಗುವುದಿಲ್ಲ.ಆಸಕ್ತರು ಜುಲೈ 15ರೊಳಗಾಗಿ ತಮ್ಮ ಪುಸ್ತಕದ ಒಂದು ಸಾದಾ ಪ್ರತಿಯನ್ನು ಸಿ.ಎಚ್. ಭಾಗ್ಯಾ, ರಿಜಿಸ್ಟ್ರಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು- 560002 ಈ ವಿಳಾಸಕ್ಕೆ ಸಲ್ಲಿಸಬೇಕು.   ಮಾಹಿತಿಗಾಗಿ ದೂರವಾಣಿ ಸಂಖ್ಯೆ (080)  22106460 ಸಂಪರ್ಕಿಸಲು ಕೋರಲಾಗಿದೆ.ದೇವದಾಸಿಯರಿಂದ ಅರ್ಜಿ ಆಹ್ವಾನ

ಬಳ್ಳಾರಿ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು  ಜಿಲ್ಲೆಯಲ್ಲಿ ನಿವೇಶನ ಹೊಂದಿ ವಸತಿ ರಹಿತರಾದ ದೇವದಾಸಿ ಮಹಿಳೆಯರಿಗೆ ವಸತಿ ಸೌಲಭ್ಯ ಕಲ್ಪಿಸಲು  ಅರ್ಜಿ ಆಹ್ವಾನಿಸಿದೆ.ಸಮೀಕ್ಷೆಯಲ್ಲಿ ಗುರುತಿಸಿರುವ 160 ಫಲಾನುಭವಿಗಳಿಗೆ ವಿಶೇಷ ಅಭಿವೃದ್ಧಿ ಮತ್ತು ವಿಶೇಷ ಘಟಕ ಯೋಜನೆ ಅಡಿ ಈ ಸೌಲಭ್ಯ ಕಲ್ಪಿಸಲಾಗುವುದು. ಆಸಕ್ತರು ದೇವದಾಸಿ ಪುನರ್ವಸತಿ ಯೋಜನೆ ಅಡಿ ತಾಲ್ಲೂಕುವಾರು ಕಾರ್ಯ ನಿರ್ವಹಿಸುತ್ತಿರುವ ಯೋಜನಾ ಅನುಷ್ಠಾನಾಧಿಕಾರಿಯಿಂದ ಇದೇ 26ರೊಳಗೆ ಅರ್ಜಿ ನಮೂನೆ ಪಡೆದು ದ್ವಿಪ್ರತಿಯಲ್ಲಿ ಭರ್ತಿ ಮಾಡಿ, ಜುಲೈ 20ರೊಳಗಾಗಿ ಸಲ್ಲಿಸಬೇಕು.ಅರ್ಜಿಯೊಂದಿಗೆ ನಿವೇಶನ ಹೊಂದಿರುವ ಬಗ್ಗೆ ದಾಖಲೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ, ಭಾವಚಿತ್ರ, ಯಾವುದೇ ಸರ್ಕಾರಿ ಯೋಜನೆ ಅಡಿ ವಸತಿ ಸೌಲಭ್ಯ ಪಡೆದಿಲ್ಲದ ಬಗ್ಗೆ ಗ್ರಾಮ ಪಂಚಾಯಿತಿಯಿಂದ ದೃಢೀಕರಣ ಪತ್ರ ಮತ್ತಿತರ ದಾಖಲೆ ಲಗತ್ತಿಸಬೇಕು ಎಂದು ಜಿಲ್ಲಾ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ತಿಳಿಸಿದ್ದಾರೆ.ಮಾಹಿತಿಗಾಗಿ ಹೊಸಪೇಟೆ ತಾಲ್ಲೂಕಿನವರು ಎಚ್. ವಿಶ್ವನಾಥ್ (99161- 54395), ಬಳ್ಳಾರಿ ಹಾಗೂ ಸಂಡೂರು ತಾಲ್ಲೂಕಿನವರು ಎಂ.ಮುಕ್ಕಣ್ಣ (99458- 33845), ಸಿರುಗುಪ್ಪದವರು ಎನ್. ನಾಗರಾಜ್ (81232- 21349), ಹಗರಿ ಬೊಮ್ಮನಹಳ್ಳಿಯವರು ವೇದಮೂರ್ತಿ (89705- 96144), ಕೂಡ್ಲಿಗಿಯವರು ಎನ್. ಮೇಘರಾಜ (98451- 41768), ಹಡಗಲಿ ತಾಲ್ಲೂಕಿನವರು ಎ.ಜಿ. ಹಾಲನಗೌಡ (98442- 23314) ಸಂಪರ್ಕಿಸಲು ಕೋರಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.