ಸೋಮವಾರ, ಜೂನ್ 21, 2021
22 °C

ಬಹುಮಾನ ಮೊತ್ತದಲ್ಲಿ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್‌): ಇಂಡಿಯಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿಯ ಬಹುಮಾನ ಮೊತ್ತದಲ್ಲಿ ಹೆಚ್ಚಳ ಮಾಡಲಾಗಿದೆ.ಈ ಹಿಂದೆ ಈ ಟೂರ್ನಿಯ ಒಟ್ಟು ಬಹುಮಾನ ಮೊತ್ತ ರೂ. 1.24 ಕೋಟಿ. ಈಗ ಆ ಮೊತ್ತವನ್ನು ರೂ. 1.55 ಕೋಟಿಗೆ ಏರಿಸಲಾಗಿದೆ.‘ಇದು ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ನ (ಬಿಡಬ್ಲ್ಯುಎಫ್‌) ನಿರ್ಧಾರ. ಎಲ್ಲಾ ಸೂಪರ್‌ ಸರಣಿ ಟೂರ್ನಿಗಳ ಬಹುಮಾನ ಮೊತ್ತ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಇನ್ನು ಮುಂದೆ ಸೂಪರ್‌ ಸರಣಿ ಟೂರ್ನಿಗಳಲ್ಲಿ ಬಹುಮಾನ ಮೊತ್ತ ಕನಿಷ್ಠ  ರೂ. 1.55 ಕೋಟಿ ಇರಬೇಕು’ ಎಂದು ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ (ಬಿಎಐ) ಉಪಾಧ್ಯಕ್ಷ ಟಿ.ಪಿ.ಎಸ್‌.ಪುರಿ ತಿಳಿಸಿದ್ದಾರೆ.ಇಂಡಿಯಾ ಓಪನ್‌ ಸೂಪರ್‌ ಸರಣಿ ಏಪ್ರಿಲ್‌ 1ರಿಂದ ಆರರವರೆಗೆ ಸಿರಿ ಫೋರ್ಟ್‌ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್‌ ಹಾಗೂ ವಿಶ್ವದ ಅಗ್ರ ರ್‍ಯಾಂಕ್‌ನ ಆಟಗಾರ ಲೀ ಚೋಂಗ್‌ ವೀ ಹಾಗೂ ವಿಶ್ವ ಚಾಂಪಿಯನ್‌ ರಚನಾಕ್‌ ಇಂಟನಾನ್‌ ಈ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಖಚಿತವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.