ಮಂಗಳವಾರ, ಡಿಸೆಂಬರ್ 10, 2019
18 °C

ಬಹುಮಾನ ವಿತರಣೆ

Published:
Updated:
ಬಹುಮಾನ ವಿತರಣೆ

ಟಾಟಾ ಸಮೂಹದ `ಟಾಟಾ ಬಿಲ್ಡಿಂಗ್ ಇಂಡಿಯಾ~ ಏರ್ಪಡಿಸಿದ್ದ ದಕ್ಷಿಣ ವಲಯ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶಿಕ್ಷಣ ತಜ್ಞ ಎನ್.ಎಸ್. ರಾಮಸ್ವಾಮಿ ಇತ್ತೀಚೆಗೆ ವಿಂಗ್‌ಹೌಸ್‌ನಲ್ಲಿ ಬಹುಮಾನ ವಿತರಿಸಿದರು.

ದಕ್ಷಿಣ ಭಾರತದ 5 ನಗರಗಳಲ್ಲಿ ಇಂಗ್ಲಿಷ್ ಮತ್ತು 12 ನಗರಗಳಲ್ಲಿ ಕನ್ನಡದ ಸ್ಪರ್ಧೆ ನಡೆಯಿತು. 

ಇಂಗ್ಲಿಷ್ ಆವೃತ್ತಿಯ ಸ್ಪರ್ಧೆ ಬೆಂಗಳೂರು, ಮಂಗಳೂರು, ವಿಜಯವಾಡ, ವೈಜಾಗ್ ಮತ್ತು ಹೈದರಾಬಾದ್‌ನ 226 ಶಾಲೆಗಳಲ್ಲಿ ಹಾಗೂ ಕನ್ನಡ ಆವೃತ್ತಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಮೈಸೂರು, ಗುಲ್ಬರ್ಗ, ಬೆಳಗಾವಿ, ಮಂಗಳೂರು/ಉಡುಪಿ, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ, ತುಮಕೂರು, ಬಿಜಾಪುರ ಮತ್ತು ರಾಯಚೂರಿನ 400 ಶಾಲೆಗಳಲ್ಲಿ ನಡೆದಿತ್ತು. ಈ ಎರಡು ಸ್ಪರ್ಧೆಗಳಲ್ಲಿ ಒಟ್ಟು 2.5 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬಹುಮಾನ ವಿತರಿಸಿ ಮಾತನಾಡಿದ ಎನ್.ಎಸ್.ರಾಮಸ್ವಾಮಿ `ಇಂತಹ ಸ್ಪರ್ಧೆಗಳು ಭವಿಷ್ಯದ ನಾಯಕರನ್ನು ರೂಪಿಸಲು ಸಹಕಾರಿ. ಇವು ಯುವಕರಲ್ಲಿ ರಾಷ್ಟ್ರೀಯ ಚಿಂತನೆ ಬೆಳೆಸಿಕೊಳ್ಳಲು ನೆರವು ನೀಡುವುದರ ಜತೆಗೆ ವೈಯುಕ್ತಿಕ ಚಿಂತನೆಗಳನ್ನು ಹಂಚಿಕೊಳ್ಳಲು ಉತ್ತಮ ವೇದಿಕೆ ಕಲ್ಪಿಸುತ್ತದೆ~ ಎಂದರು.

ಪ್ರತಿಕ್ರಿಯಿಸಿ (+)