ಗುರುವಾರ , ಮೇ 6, 2021
23 °C

ಬಹುಮಾನ ಸಾಕ್ಷ್ಯಾಧಾರಕ್ಕಾಗಿ, ಸಯೀದ್ ತಲೆಗಾಗಿ ಅಲ್ಲ: ಅಮೆರಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ~ಲಷ್ಕರ್-ಇ-ತೊಯ್ಬಾ ಸ್ಥಾಪಕ ಹಫೀಜ್ ಸಯೀದ್ ಸಲುವಾಗಿ 1 ಕೋಟಿ ಡಾಲರ್ ಬಹುಮಾನ ಘೋಷಣೆ ಮಾಡಿದ್ದು ಆತನ ನೆಲೆ ಪತ್ತೆ ಹಚ್ಚುವುದಕ್ಕಾಗಿ ಅಲ್ಲ, ಬದಲಿಗೆ ಮುಂಬೈ ಭಯೋತ್ಪಾದಕ ದಾಳಿಯ ರೂವಾರಿಯನ್ನು ಅಪರಾಧಿಯನ್ನಾಗಿ ನ್ಯಾಯಾಲಯದಲ್ಲಿ ಸಾಬೀತು ಪಡಿಸಲು ಸಾಧ್ಯವಾಗುವಂತಹ ಸಾಕ್ಷಾಧಾರಕ್ಕಾಗಿ~ ಎಂದು ಅಮೆರಿಕ ಹೇಳಿದೆ.~ನಮಗೆಲ್ಲ ಆತ ಎಲ್ಲಿದ್ದಾನೆ ಎಂಬುದು ಗೊತ್ತು. ಪ್ರತಿಯೊಬ್ಬ ಪತ್ರಕರ್ತನಿಗೂ ಆತನನ್ನು ಪತ್ತೆ ಹಚ್ಚುವುದು ಹೇಗೆ ಎಂಬುದು ಗೊತ್ತಿದೆ. ನಾವು ಹುಡುಕಾಡುತ್ತಿರುವುದು ಆತನನ್ನು ನ್ಯಾಯಾಲಯದ ಕಟಕಟೆಯಲ್ಲಿ ಅಪರಾಧಿಯನ್ನಾಗಿ ನಿಲ್ಲಿಸಿ ಶಿಕ್ಷಿಸಲು ಸಾಧ್ಯವಾಗುವಂತಹ ಮಾಹಿತಿಗಾಗಿ~ ಎಂದು ವಿದೇಶಾಂಗ ಇಲಾಖೆ ವಕ್ತಾರ ಮಾರ್ಕ್ ಟೋನರ್ ಹೇಳಿದರು.ಆತನನ್ನು ಅಮೆರಿಕ ಅಥವಾ ಯಾವುದೇ ವಿದೇಶೀ ನ್ಯಾಯಾಲಯದಲ್ಲಿ ಶಿಕ್ಷೆಗೆ ಗುರಿ ಪಡಿಸಬಹುದು ಎಂದೂ ಅವರು ನುಡಿದರು.~ಪಾಕಿಸ್ತಾನೀಯರೇ ಈ ವ್ಯಕ್ತಿಯನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಲು ಸಾಧ್ಯವಾಗುವಂತಹ ಸಾಕ್ಷ್ಯಾಧಾರ- ಮಾಹಿತಿ ಒದಗಿಸಲು ಜನರು ಮುಂದೆ ಬರುವುದನ್ನು ನಾವು ಎದುರು ನೋಡುತ್ತಿದ್ದೇವೆ~ ಎಂದು ಅವರು ನುಡಿದರು.~ನ್ಯಾಯಾಲಯದ ವಿಚಾರಣೆಯಲ್ಲಿ ಸಯೀದ್ ವಿರುದ್ಧ ಗಟ್ಟಿಯಾಗಿ ನಿಲ್ಲಬಲ್ಲಂತಹ ಸಾಕ್ಷ್ಯಾಧಾರಕ್ಕಾಗಿ ನಾವು ಕಾದಿದ್ದೇವೆ~ ಎಂದು ಸುದ್ದಿಗೋಷ್ಠಿಯಲ್ಲಿ ಟೋನರ್ ಹೇಳಿದರು.ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಹತ್ಯೆ ಮಾಡಿದಂತೆ ತನ್ನ ವಿರುದ್ಧವೂ ಕಾರ್ಯಾಚರಣೆ ನಡೆಸುವಂತೆ ಸಯೀದ್ ಪತ್ರಿಕಾಗೋಷ್ಠಿಯಲ್ಲಿ ಅಮೆರಿಕಕ್ಕೆ ಸವಾಲು ಹಾಕಿದ ಬೆನ್ನಲ್ಲೇ ಅಮೆರಿಕದಿಂದ ಸ್ಪಷ್ಟನೆ ಬಂದಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.