ಬಹುವಾದ್ಯಗಳಿಂದ ಢಣ್ ಢಣ್ ಮಿಂಚು..!

7

ಬಹುವಾದ್ಯಗಳಿಂದ ಢಣ್ ಢಣ್ ಮಿಂಚು..!

Published:
Updated:
ಬಹುವಾದ್ಯಗಳಿಂದ ಢಣ್ ಢಣ್ ಮಿಂಚು..!

ಕಿವಿಗೆ ರಿಂಗ್, ಕಡುಗೆಂಪು ಬಣ್ಣದ ಜಾಕೆಟ್, ತಲೆಗೆ ಕಟ್ಟಿಕೊಂಡಿದ್ದ ಅದೇ ಬಣ್ಣದ ಕರ್ಚೀಫ್.. ಕೈಯ್ಯಲ್ಲಿ ಎರಡು ಕೋಲುಗಳನ್ನು ಹಿಡಿದು ಶಿವಮಣಿ ವೇದಿಕೆ ಏರಿದಾಗ ವಾದ್ಯಗಳನ್ನು ನುಡಿಸುವುದಕ್ಕೆ ಮುನ್ನವೇ ಶಿಳ್ಳು, ಚಪ್ಪಾಳೆಗಳ ಸುರಿಮಳೆ.

 

ಒತ್ತೊತ್ತಾಗಿ ಜೋಡಿಸಿದ ವಿವಿಧ ವಾದ್ಯಗಳ ಮಧ್ಯೆ ಬಂದು ದೊಡ್ಡ ತಟ್ಟೆಯಾಕಾರದ ವಾದ್ಯಕ್ಕೆ `ಢಣ್~ ಎಂದು ಬಡಿದಾಗ ಕೇಳುಗರ ಎದೆಯಲ್ಲೂ ಢಣ್ ಢಣ್ ಎಂಬಂತಹ ಸಂಚಲನ..! ಹೌದು, ಇದು ಬಹು ವಿಧದ ವಾದ್ಯ ಪ್ರವೀಣ ಲಯವಾದ್ಯ ನಿಪುಣ ಆನಂದನ್ ಶಿವಮಣಿ

             ಬಿ.ಎಸ್. ಸುಕುಮಾರ್

ಅವರ ವಾದ್ಯ ವೈಶಿಷ್ಟ್ಯ. ವಾದ್ಯಗಳಲ್ಲಿ ಪ್ರಯೋಗಶೀಲತೆ ಶಿವಮಣಿ ಅವರ ವಿಶಿಷ್ಟತೆ. ಪ್ರತಿ ಕಛೇರಿಗಳಲ್ಲಿಯೂ ಏನಾದರೂ ಒಂದು ಹೊಸತನ; ಥಟ್ ಅಂತ ಸೆಳೆಯುವಂತೆ ಮಾಡುವ ಚಾಣಾಕ್ಷತನ. ಹದಿಹರೆಯದವರೇ ಏಕೆ, 60-70 ರ ಇಳಿವಯಸ್ಸಿನವರನ್ನೂ ವಾದ್ಯದ ಲಯಕ್ಕೆ ಮೋಡಿ ಮಾಡಿಸುವಂತಹ ಕುಶಲತೆ ಶಿವಮಣಿ ಸಂಗೀತದಲ್ಲಿದೆ.  ಆರ್ಕೆಸ್ಟ್ರಾಗಳನ್ನು ಇಷ್ಟಪಡುವ ಆಧುನಿಕ ಮನೋಭಾವದ ಬಹುತೇಕರಿಗೆ ಶಿವಮಣಿ ಸಂಗೀತ ಎಂದರೆ ಬಹಳ ಇಷ್ಟ. ಒಂದೇ ವೇದಿಕೆಯಲ್ಲಿ ಇವರು ಬಾರಿಸುವ ಮುಖ್ಯ ವಾದ್ಯಗಳ ಸಂಖ್ಯೆ ಐದು.

 

ಈ ವಾದ್ಯಗಳ ಹೆಸರು ಕೇಳಿ.. ಡ್ರಮ್ಸ, ಅಕ್ಟೊಬನ್, ಡರ್ಬುಕ, ಉಡುಕೈ (ಎಲ್ಲವೂ ವಿದೇಶಿ ಮೂಲದ ವಾದ್ಯಗಳೇ) ಮತ್ತು ಖಂಜೀರ. ಇದರ ಜತೆಗೆ ಸಿಂಬಲ್ಸ್, ಡಿಂಬಾಲೆ, ಬಾಂಗ್ರಾ ಡೋಲು, ಎಲೆಕ್ಟ್ರಾನಿಕ್ ಪ್ಯಾಡ್ಸ್, ಪರ್ಕಷನ್ ಟಾಯ್ಸ, ಟೈಕೊ ಇವೆಲ್ಲವೂ ಶಿವಮಣಿ ಸುತ್ತಮುತ್ತ ಸದ್ದು ಮಾಡುತ್ತಿರುತ್ತದೆ.ಚೆನ್ನೈ ಮೂಲದ ಈ ವಾದ್ಯಗಾರ ಡ್ರಮ್ಸ ಅನ್ನು ಕಲಿಯಲಾರಂಭಿಸಿದ್ದು ಏಳನೇ ವಯಸ್ಸಿಗೇ. 11 ನೇ ವಯಸ್ಸಿಗೇ ಉಳಿದೆಲ್ಲ ವಾದ್ಯಗಳನ್ನು ಒಲಿಸಿಕೊಂಡರು. ಎಂ.ಎಸ್. ವಿಶ್ವನಾಥನ್, ಇಳಯರಾಜ, ಎ.ಆರ್. ರೆಹಮಾನ್ ಅವರ ಸಂಗೀತಗಳಿಗೆಲ್ಲ ಶಿವಮಣಿ ವಾದ್ಯ ಸಹಕಾರ ನೀಡಿದ್ದರು.ಈ ವಾದ್ಯ ಮೋಡಿಗಾರನಿಗೆ, ಕರ್ನಾಟಕ ಸಂಗೀತದ ಹಿರಿಯ ಕಲಾವಿದರ ಒಡನಾಟವಿದ್ದು ಸಂಗೀತದಲ್ಲಿ ಭದ್ರವಾಗಿ ನೆಲೆ ನಿಲ್ಲುವಂತೆ ಮಾಡಿತು. ಪಿಟೀಲು ಮಾಂತ್ರಿಕರಾಗಿದ್ದ ಕುನ್ನಕುಡಿ ವೈದ್ಯನಾಥನ್, ಎಲ್. ಶಂಕರ್, ಟಿ.ವಿ. ಗೋಪಾಲಕೃಷ್ಣನ್, ವಲ್ಲಿಯಪಟ್ಟಿ ಸುಬ್ರಹ್ಮಣ್ಯಮ್ ಅವರೊಂದಿಗಿನ ನಿರಂತರ ಒಡನಾಟದಿಂದ ಇವರು ವಾದ್ಯಗಳಲ್ಲಿ ಮೋಡಿ ಮಾಡಲಾರಂಭಿಸಿದರು.

 

ತಬಲಾಕ್ಕೆ ಅನ್ವರ್ಥನಾಮವಾದ ಜಾಕೀರ್ ಹುಸೇನ್ ಅವರೊಂದಿಗೂ ಶಿವಮಣಿ ಕೈಚಳಕ ತೋರಿದವರು. ಮುಂಬಯಿಯಲ್ಲಿ ನಡೆದ ಫ್ಯೂಷನ್ ಸಂಗೀತದಲ್ಲಿ ತ್ರಿಲೋಕ್ ಗುರ್ತು ಅವರೊಂದಿಗೆ ವೇದಿಕೆ ಹಂಚಿಕೊಂಡ ಇವರು, ವಿಶ್ವದಾದ್ಯಂತ ವಾದ್ಯಗಳ ಮೂಲಕ ಸಂಚಲನ ಮೂಡಿಸಿದ ಅಪರೂಪದ ಕಲಾವಿದ. ಶಂಕರ್ ಮಹದೇವನ್, ಹರಿಹರನ್, ಮ್ಯಾಂಡೊಲಿನ್ ಯು. ಶ್ರೀನಿವಾಸ್, ಲಿಯೋ ಮೆಂಡೋನ್ಸಾ ಅವರೊಂದಿಗೆ ತಂಡ ಕಟ್ಟಿಕೊಂಡು ವಿಶ್ವದಾದ್ಯಂತ ವಾದ್ಯಗಳನ್ನು ನುಡಿಸಿದವರು.ಸಿನಿಮಾಗಳಲ್ಲೂ

ಹಲವಾರು ಸಿನಿಮಾಗಳಲ್ಲೂ ಇವರ ಡ್ರಮ್ಸ ನಿನಾದಿಸಿದೆ. ಹಿಂದಿ ಹಿಟ್ ಸಿನಿಮಾಗಳಾದ ರೋಜಾ, ರಂಗ್ ದೆ ಬಸಂತಿ, ತಾಲ್, ಲಗಾನ್, ದಿಲ್ ಸೆ, ಕಾಬೂಲ್ ಎಕ್ಸ್‌ಪ್ರೆಸ್ ಸಿನಿಮಾಗಳಲ್ಲಿ ಶಿವಮಣಿ ಮಿಂಚಿದ್ದಾರೆ. ಕಾದಲ್ ರೋಜಾವೆ.., ಚಯ್ಯ ಚಯ್ಯ ಹಾಡುಗಳು ಶಿವಮಣಿ ಡ್ರಮ್ಸನಿಂದ ಹಿಟ್ ಆಯ್ತು ಎನ್ನುವವರೂ ಇದ್ದಾರೆ.`ತಾಳವಾದ್ಯಗಳು ಮಾಧುರ್ಯಭರಿತವಾಗಿರುತ್ತವೆ. ಸಂಗೀತಕ್ಕೆ ತಾಳವಾದ್ಯಗಳು ಬೆನ್ನೆಲುಬು ಇದ್ದ ಹಾಗೆ. ಜಾಸ್ ಮತ್ತಿತರ ಜನಪ್ರಿಯ ಸಂಗೀತಗಳಲ್ಲಿ ಡ್ರಮ್ಸ, ಗಿಟಾರ್ ಪಾತ್ರ ಬಹಳ ಮುಖ್ಯ. ಆರ್ಕೆಸ್ಟ್ರಾಗಳಲ್ಲಿ ಬರೀ ಸಿನಿಮಾ ಸಂಗೀತವೇ ಮೊಳಗಿದರೂ ಎಲ್ಲದಕ್ಕೂ ಸುಭದ್ರವಾದ ಶಾಸ್ತ್ರೀಯ ಹಿನ್ನೆಲೆ ಮುಖ್ಯ~ ಎನ್ನುತ್ತಾರೆ ಶಿವಮಣಿ.ಬಹು ಜನಪ್ರಿಯ ಆರ್ಕೆಸ್ಟ್ರಾ

ನೀವು ಆರ್ಕೆಸ್ಟ್ರಾ ಪ್ರಿಯರಾದರೆ ವೇದಿಕೆ ತುಂಬ ನೀಟಾಗಿ ಜೋಡಿಸಿರುವ ವಿವಿಧ ರೀತಿಯ ಸಂಗೀತ ವಾದ್ಯಗಳು ಕೇಳುಗರನ್ನು ಮೋಡಿ ಮಾಡುವುದಂತೂ ನಿಜ. ದೊಡ್ಡ ದೊಡ್ಡ ಹಂಡೆ ತರದ ಡ್ರಮ್ಸ, ತಟ್ಟೆಯಾಕಾರದ ಸಿಂಬಲ್ಸ್ ಗಾತ್ರ, ಆಕಾರಗಳಲ್ಲಿರುವ ಈ ಲಯ ವಾದ್ಯಗಳ ನಾದ ಕೇಳುಗರಿಗೆ ವಿಶಿಷ್ಟವಾದ ಅನುಭವ ನೀಡುತ್ತದೆ.`ಸಂಗೀತದಲ್ಲಿ `ತಟ್ಟಿ ಬಾರಿಸುವ ವಾದ್ಯ~ (ಪರ್ಕಷನ್ ಇನ್‌ಸ್ಟ್ರುಮೆಂಟ್) ಆಧುನಿಕ ಮನೋಭಾವದವರನ್ನು ಇಂದು ಬಹುವಾಗಿ ಸೆಳೆಯುತ್ತಿದೆ. ಈ ವಾದ್ಯಗಳ ಗುಂಪಿನಲ್ಲಿ ಅನೇಕ ತರದ ವಾದ್ಯಗಳಿದ್ದು, ಕೈಗಳಿಂದ, ಕೋಲಿನಿಂದ, ಯಾವುದಾದರೂ ಮೆಟಲ್‌ನಿಂದ ಬಡಿಯುವ, ಗುದ್ದುವ ಮೂಲಕ ವಿವಿಧ ರೀತಿಯ ನಾದ ತರಬಹುದು.ಒಂದೇ ವೇದಿಕೆಯಲ್ಲಿ ಅನೇಕ ರೀತಿಯ ವಾದ್ಯಗಳನ್ನು ಇಟ್ಟು ಬೇರೆ ಬೇರೆ ಕಲಾವಿದರು ನುಡಿಸುವ ವಿಶಿಷ್ಟ ಸಂಗೀತ ವಾದ್ಯ ಪ್ರಕಾರವಿದು~ ಎನ್ನುತ್ತಾರೆ ತ್ಯಾಗರಾಜ ನಗರದಲ್ಲಿರುವ ಬಾಬು ಸ್ಕೂಲ್ ಆಫ್ ರಿದಮ್ಸನ ಸಂಸ್ಥಾಪಕ ಬಿ.ಎಸ್. ಸುಕುಮಾರ್.

ಶಾಸ್ತ್ರೀಯ ಸಂಗೀತದ ಮಾಧುರ್ಯ ಬಯಸುವವರಿಗೆ ಆರ್ಕೆಸ್ಟ್ರಾ ಸಂಗೀತ ಆಪ್ತವಾಗದೇ ಇದ್ದರೂ ಇದರಲ್ಲಿನ ಕೆಲವು ವಾದ್ಯಗಳು ಮಾತ್ರ ಸಂಗೀತ ಪ್ರಿಯರನ್ನು ಸೆಳೆಯದೇ ಇರದು. ಇಲ್ಲಿ ದೊಡ್ಡ ದೊಡ್ಡ ಡ್ರಮ್ಸ, ರಿದಮ್‌ಪ್ಯಾಡ್, ಪಿಯಾನೊ, ಕೀಬೋರ್ಡ್.. ಹೀಗೆ ಹಲವು ವಾದ್ಯಗಳ ಸಮ್ಮಿಶ್ರಣಗಳಿರುತ್ತವೆ.  ಪರ್ಕಷನ್ ವಾದ್ಯಗಳಲ್ಲಿ ಎರಡು ವಿಧ. ಒಂದು `ಪಿಚ್ಡ್~ ಪರ್ಕಷನ್ ಮತ್ತು `ಅನ್‌ಪಿಚ್ಡ್~ ಪರ್ಕಷನ್ ವಾದ್ಯ. ಪಿಚ್ಡ್‌ನಲ್ಲಿ ನಾವು ಸುಲಭವಾಗಿ ಗುರುತಿಸುವಂಥ ನೋಟ್ಸ್ ಇರುತ್ತದೆ. ಆದರೆ ಅನ್‌ಪಿಚ್ಡ್‌ನಲ್ಲಿ ನಾವು ಗುರುತಿಸಲಾಗದೇ ಇರುವಂಥ ನೋಟ್ಸ್‌ಗಳಿರುತ್ತವೆ.ನಗರದಲ್ಲಿ ಪಾಶ್ಚಾತ್ಯ ಡ್ರಮ್ಸ ಕಲಿಸುವ ಅನೇಕ ಶಾಲೆಗಳಿವೆ. ಅನೇಕ ಮಂದಿ ಕಲಿಯುತ್ತಾರೆ. ಬಿ.ಎಸ್. ಸುಕುಮಾರ್ ಅವರು ಡ್ರಮ್ಸನಲ್ಲಿ ಅತ್ಯಂತ ಹಿರಿಯ ಮತ್ತು ಖ್ಯಾತನಾಮರು. ಕಳೆದ ಸುಮಾರು 45 ವರ್ಷಗಳಿಂದ ಪಾಶ್ಚಾತ್ಯ ಡ್ರಮ್ಸ ನುಡಿಸುವ ಇವರು `ಡ್ರಮ್ಸ ಬಾಬು~ ಎಂದೇ ಖ್ಯಾತಿ ಪಡೆದವರು. ಪಾಶ್ಚಾತ್ಯ ಡ್ರಮ್ಸ ನುಡಿಸಾಣಿಕೆ ಬಗ್ಗೆ, ಕಲಿಯುವ ಆಸಕ್ತಿ ಇರುವವರು ಸುಕುಮಾರ್ ಅವರನ್ನು 99860 42538ನಲ್ಲಿ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry