ಬಹೂಪಯೋಗಿ `ಬಿಪಿ ಮಾನಿಟರ್

7

ಬಹೂಪಯೋಗಿ `ಬಿಪಿ ಮಾನಿಟರ್

Published:
Updated:
ಬಹೂಪಯೋಗಿ `ಬಿಪಿ ಮಾನಿಟರ್

ಲಕ್ಷಗಟ್ಟಲೆ ಮೊಬೈಲ್ ಆ್ಯಪ್‌ಗಳಲ್ಲಿ ಒಂದೊಂದೂ ಭಿನ್ನ ಬಗೆಯವು. ಐಫೋನ್ ಹಾಗೂ ಆಂಡ್ರಾಯ್ಡ ಫೋನುಗಳಿಗೆ 40 ಸಾವಿರದಷ್ಟು ಆರೊಗ್ಯ ಸಂಬಂಧಿ ಆ್ಯಪ್‌ಗಳಿವೆ. ಇವುಗಳಲ್ಲಿ ಹಲವು ಉಚಿತವಾದರೆ ಉಳಿದವರು 0.99ರಿಂದ 2.99 ಡಾಲರ್(ರೂ 53ರಿಂದ  ರೂ160)ರವರೆಗೂ ಶುಲ್ಕ ನೀಡಿ ಪಡೆಯಬೇಕು.2012ರಲ್ಲಿ ಪ್ರಪಂಚದ 24 ಕೋಟಿ ಜನ ಆರೋಗ್ಯ ಸಂಬಂಧಿತ ಆ್ಯಪ್‌ಗಳನ್ನು ತಮ್ಮ ಮೊಬೈಲ್‌ಗಳಿಗೆ ಡೌನ್‌ಲೋಡ್ ಮಾಡಿಕೊಂಡು ಬಳಸುತ್ತಿದ್ದಾರೆ. ಇವುಗಳಲ್ಲಿ ಕೆಲವು ರಕ್ತದೊತ್ತಡ ಪರೀಕ್ಷೆ ಮಾಡುವುದಾದರೆ, ಕೆಲವು ರಕ್ತದಲ್ಲಿ ಸಕ್ಕರೆ ಅಂಶ ಪತ್ತೆ ಮಾಡುವ, ತೂಕ ಇಳಿಸಿಕೊಳ್ಳುವ ಬಗ್ಗೆ ಉಪಯುಕ್ತ ಮಾಹಿತಿ ನೀಡುವ, ಮಳಿಗೆಯಲ್ಲಿ ಉತ್ತಮ ಪೌಷ್ಠಿಕಾಂಶ ಇರುವ ಆಹಾರಗಳನ್ನು ಪತ್ತೆ ಮಾಡಿ ಆಯ್ಕೆ ಮಾಡಲು ಸಹಕರಿಸುವಂತಹ ತರಹೇವಾರಿ ಆ್ಯಪ್‌ಗಳು ಇವೆ. ಆದರೆ ಲಭ್ಯವಿರುವ ಆ್ಯಪ್‌ಗಳಲ್ಲಿ ಉಪಯುಕ್ತವಾಗುವಂತಹದ್ದು ಹಾಗೂ ಅಷ್ಟೇ ಪರಿಣಾಮಕಾರಿಯಾಗಿ ಫಲಿತಾಂಶ ನೀಡುವ ಆ್ಯಪ್‌ಗಳನ್ನು ಪತ್ತೆ ಮಾಡುವುದು ಹೇಗೆ? ಎಂಬುದೇ ಎಲ್ಲರ ಪ್ರಶ್ನೆ. ಈ ನಿಟ್ಟಿನಲ್ಲಿ ರಕ್ತದೊತ್ತಡ ಪರೀಕ್ಷೆ ಮಾಡುವ `ಬಿಪಿ ಮಾನಿಟರ್' ಎಂಬ ಆ್ಯಪ್ ಇರುವುದರಲ್ಲಿಯೇ ಉತ್ತಮವಾದುದು.`ಬಿಪಿ ಮಾನಿಟರ್' ಇಡೀ ಕುಟುಂಬದ ರಕ್ತದೊತ್ತಡ ಹಾಗೂ ದೇಹದ ತೂಕ ಕುರಿತ ಸಮಗ್ರ ಮತ್ತು ಸಚಿತ್ರ ಮಾಹಿತಿ ನೀಡಬಲ್ಲ ಉಪಯುಕ್ತ ಆ್ಯಪ್. ಇದನ್ನು ಇನ್‌ಸ್ಟಾಲ್ ಮಾಡಿಕೊಂಡ ದಿನದಿಂದಲೂ ತಪಾಸಣೆ ನಡೆಸಿದ ಕುರಿತ ಪ್ರತಿ ಮಾಹಿತಿಯೂ ಸದಾ ಕಾಲ ಲಭ್ಯ.ರಕ್ತದ ಸಿಸ್ಟೋಲಿಕ್ ಹಾಗೂ ಡಯಸ್ಟೋಲಿಕ್ ರಕ್ತದೊತ್ತಡ ಪತ್ತೆ ಮಾಡುವ ಈ ಆ್ಯಪ್, ಬಣ್ಣದ ಚಿತ್ರಗಳ ಮೂಲಕ ಅವುಗಳ ವಿವರಗಳನ್ನೂ ನೀಡುತ್ತದೆ. ಫಲಿತಾಂಶವನ್ನು ಆಯಾ ದೇಶದ ವೈದ್ಯರು ನೋಡುವ ಆಧಾರದ ಮೇಲೆ (ಮೆಟ್ರಿಕ್ ಅಥವಾ ಅಮೆರಿಕ/ಬ್ರಿಟನ್) ಯೂನಿಟ್ಸ್‌ಗಳಲ್ಲಿ ನೀಡುತ್ತದೆ. ತಪಾಸಣೆ ನಂತರ ದೊರೆತ ಫಲಿತಾಂಶವನ್ನು ವೈದ್ಯರಿಗೆ ಇಮೇಲ್ ಮೂಲಕ ರವಾನೆ ಮಾಡುವ ಸೌಲಭ್ಯವೂ ಇದರಲ್ಲಿದೆ.ಬಳಸಲು ಸುಲಭ, ಹಿಂದಿನ ತಪಾಸಣೆಯ ಮಾಹಿತಿಯೊಂದಿಗೆ ಈಗಿನದ್ದನ್ನೂ ಹೋಲಿಸಿ ವರದಿ ನೀಡುವ ಸೌಲಭ್ಯ, ರಕ್ತದೊತ್ತಡ ಪರೀಕ್ಷಿಸಲು ಮರೆತಲ್ಲಿ ನೆನಪು ಮಾಡುವ ಸೌಲಭ್ಯವೂ ಇದರಲ್ಲಿದೆ. ಜತೆಗೆ ಎರಡೂ ಕೈಗಳಲ್ಲಿನ ರಕ್ತದೊತ್ತಡದ ವ್ಯತ್ಯಾಸದ ಜತೆಗೆ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನೂ ಪತ್ತೆ ಮಾಡಿ ಹೇಳಬಲ್ಲದು. ಕುಟುಂಬದ ಇತರ ಸದಸ್ಯರ ರಕ್ತದೊತ್ತಡವನ್ನೂ ಪತ್ತೆ ಮಾಡಬಲ್ಲ ಬಿಪಿ ಮಾನಿಟರ್, ಬಹೂಪಯೋಗಿ ಆಪ್.ಚಿತ್ತಾಕರ್ಷಕ ನಕ್ಷೆಯಲ್ಲಿ ಮೂಡುವ ಮಾಹಿತಿಯು ಬೇಕಾದ ಎಲ್ಲಾ ರೀತಿಯ ಉಪಯುಕ್ತ ವಿವರಗಳನ್ನೂ ನೀಡುತ್ತದೆ. ಜತೆಗೆ ಅವುಗಳನ್ನು ಪಿಡಿಎಫ್, ಸಿಎಸ್‌ವಿ, ಸಾಧಾರಣ ಸಂದೇಶ ಮಾದರಿಯಲ್ಲಿ ಮಾಹಿತಿಯನ್ನು ಉಳಿಸಿಕೊಳ್ಳಲಿದೆ.ಆ್ಯಪ್ ಹೆಸರು: ಬಿಪಿ ಮಾನಿಟರ್

ವಿಭಾಗ: ವೈದ್ಯಕೀಯ

ಆವೃತ್ತಿ: 2.5

ಗಾತ್ರ: 3.6ಎಂಬಿ

ಪರಿಷ್ಕರಣೆ: 10 ಜನವರಿ 2013

ಭಾಷೆ: ಇಂಗ್ಲಿಷ್, ಚೈನೀಸ್, ಜಪಾನೀಸ್, ಫ್ರೆಂಚ್, ಜರ್ಮನ್, ಕೊರಿಯನ್, ಸ್ಪಾನಿಷ್

ಡೆವಲಪರ್: ಟಾಕೊನಿಕ್ ಸಿಸ್ಟಂ ಎಲ್‌ಎಲ್‌ಸಿ

ಬೆಲೆ: ಐಫೋನ್: 0.99 ಡಾಲರ್, ಐಟ್ಯೂನ್ಸ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು

ಆ್ಯಂಡ್ರಾಯ್ಡ: ಉಚಿತ. ಆ್ಯಂಡ್ರಾಯ್ಡ ಮೊಬೈಲ್‌ನಲ್ಲಿರುವ ಆಪ್ ಬ್ರೈನ್ ಮೂಲಕ ಆಂಡ್ರಾಯ್ಡ ಮಾರ್ಕೆಟ್‌ನಲ್ಲಿ ಇದನ್ನು ಪಡೆಯಬಹುದು

ರೇಟಿಂಗ್: 4+

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry