ಶನಿವಾರ, ಜನವರಿ 18, 2020
26 °C

ಬಹ್ರೇನ್‌: ಡಿ. 17ಕ್ಕೆ ‘ಕನ್ನಡ ವೈಭವ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ (ಐಎಎನ್‌ಎಸ್‌): ಬಹ್ರೇನ್‌ನ ರಾಜಧಾನಿ ಮನಾಮದಲ್ಲಿ ಡಿ. 17 ರಂದು ಕರ್ನಾಟಕದ ಇತಿಹಾಸ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ‘ಕನ್ನಡ ವೈಭವ’ ಕಾರ್ಯಕ್ರಮ ನಡೆಯಲಿದೆ.ಕನ್ನಡ ಸಂಘ, ಬಹ್ರೇನ್‌ನ ಪ್ರಮುಖ ವಲಸಿಗ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದಿಂದ ಮನಾಮದ ಆಲ್‌ ರಾಜಾ ಶಾಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಿದೆ ಎಂದು ಗಲ್ಫ್‌ ಡೈಲಿ ನ್ಯೂಸ್‌ ವರದಿ ಮಾಡಿದೆ.‘ಖ್ಯಾತ ಕೊಳಲುವಾದಕ ಪ್ರವೀಣ್ ಗೋಡ್ಕಿಂಡಿ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿದ್ದಾರೆ. ನಮ್ಮ ಕಲೆ ಸಂಸ್ಕೃತಿಯನ್ನು ಪ್ರಸ್ತುತಪಡಿಸಲು ನಾವೆಲ್ಲ ಮತ್ತೊಮ್ಮೆ ಒಂದಾಗುತ್ತಿದ್ದೇವೆ’ ಎಂದು ಕನ್ನಡ ಸಂಘದ ಅಧ್ಯಕ್ಷ ಬಿ. ರಾಜ್‌ಕುಮಾರ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)