ಸೋಮವಾರ, ಅಕ್ಟೋಬರ್ 14, 2019
22 °C

ಬಾಂಗ್ಲಾ:ಅಪರಾಧಿಗೆ ಜಾಮೀನು ನಕಾರ

Published:
Updated:

ಢಾಕಾ (ಪಿಟಿಐ): 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧ (ಸ್ವಾತಂತ್ರ್ಯ ಹೋರಾಟ)ದ ವೇಳೆ ಪಾಕಿಸ್ತಾನದ ಜೊತೆ ಸೇರಿ ಪಿತೂರಿ ನಡೆಸಿದ ಆರೋಪದ ಮೇಲೆ ಶಿಕ್ಷೆಗೆ ಒಳಗಾಗಿದ್ದ ಗುಲಾಂ ಆಜಂ (90) ಅವರ ಜಾಮೀನು ಅರ್ಜಿಯನ್ನು ನ್ಯಾಯ ಮಂಡಳಿ ತಳ್ಳಿ ಹಾಕಿದೆ.ವೃದ್ಧಾಪ್ಯ ಆಧಾರದ ಮೇಲೆ ಜಾಮೀನು ನೀಡಬೇಕೆಂಬ ಅರ್ಜಿದಾರರ ಪರ ವಕೀಲರ ವಾದವನ್ನು ತಳ್ಳಿಹಾಕಿದ ಮೂವರು ಸದಸ್ಯರ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ ಮುಖ್ಯ ನ್ಯಾಯಾಧೀಶ ನಿಜಾಮ್ಲ್ಲುಲಾ ಹಖಾಯಿ ಅವರು, ಯುದ್ಧ ಅಪರಾಧಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಫೆ.15 ಕ್ಕೆ ಮುಂದೂಡಿದರು.

 

Post Comments (+)