ಬಾಂಗ್ಲಾಕ್ಕೆ ಅಶ್ರಫುಲ್ ಬಲ: ಜ್ಯಾಮಿ

7

ಬಾಂಗ್ಲಾಕ್ಕೆ ಅಶ್ರಫುಲ್ ಬಲ: ಜ್ಯಾಮಿ

Published:
Updated:

ಢಾಕಾ (ಪಿಟಿಐ): ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಸೋತಿರುವ ಬಾಂಗ್ಲಾ ಕ್ರಿಕೆಟ್ ತಂಡ ಶುಕ್ರವಾರ ಐರ್ಲೆಂಡ್ ವಿರುದ್ಧದ ಪಂದ್ಯಕ್ಕೆ ಬ್ಯಾಟ್ಸ್‌ಮನ್ ಮೊಹಮ್ಮದ್ ಅಶ್ರಫುಲ್ ಅವರನ್ನು ಅಂಕಣಕ್ಕಿಳಿಸುವ ನಿರೀಕ್ಷೆಯಿದೆ.  ಬಾಂಗ್ಲಾ ತಂಡದ ಮಾಜಿ ನಾಯಕರೂ ಆಗಿರುವ ಅಶ್ರಫುಲ್ ಏಕದಿನ ಪಂದ್ಯದಲ್ಲಿ ಯಶಸ್ವಿ ಬ್ಯಾಟ್ಸ್‌ಮನ್ ಕೂಡ ಹೌದು. ಟೂರ್ನಿಯ ಎರಡನೇ ಪಂದ್ಯದಲ್ಲಿ ಅಶ್ರಫುಲ್ ಮರಳುವ ಕುರಿತು ಸುದ್ದಿಗಾರರಿಗೆ  ತಂಡದ ಕೋಚ್ ಜ್ಯಾಮಿ ಸಿಡಾನ್ಸ್ ತಿಳಿಸಿದರು.“ಅಶ್ರಫುಲ್ 164 ಪಂದ್ಯಗಳನ್ನು ಆಡಿರುವ ಅನುಭವಿ. ಅಲ್ಲದೇ 3.360 ರನ್ನುಗಳು ಅವರ ಖಾತೆಯಲ್ಲಿವೆ. ತಮ್ಮ ಬಿರುಸಾದ ಹೊಡೆತಗಳಿಗೆ ಹಲವು ಬಾರಿ ಅವರು ಟೀಕೆ ಎದುರಿಸಿದ್ದಾರೆ. ಆದರೆ ನಾನು ಅಶ್ರಫುಲ್ ಅಭಿಮಾನಿ, ಅವರು ಆಡುವುದನ್ನು ನೋಡಲು ನಾನು ಇಷ್ಟಪಡುತ್ತೇನೆ’ ಎಂದು ಅವರು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry