ಬಾಂಗ್ಲಾಕ್ಕೆ ಗೆಲುವು

7

ಬಾಂಗ್ಲಾಕ್ಕೆ ಗೆಲುವು

Published:
Updated:

ಚಿತ್ತಗಾಂಗ್ (ಎಎಫ್‌ಪಿ): ಬಾಂಗ್ಲಾದೇಶ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ಭರ್ಜರಿ ಗೆಲುವು ಪಡೆದು ಸಮಾಧಾನಪಟ್ಟುಕೊಂಡಿತು. ಆದರೆ ಮೊದಲ ಎರಡು ಪಂದ್ಯಗಳನ್ನು ಗೆದ್ದುಕೊಂಡಿದ್ದ ವಿಂಡೀಸ್ ಮೂರು ಪಂದ್ಯಗಳ ಸರಣಿಯನ್ನು 2-1 ರಲ್ಲಿ ತನ್ನದಾಗಿಸಿತು.ಇಲ್ಲಿನ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಮಂಗಳವಾರ ಮೊದಲು ಬ್ಯಾಟ್ ಮಾಡಿದ ವಿಂಡೀಸ್ 22 ಓವರ್‌ಗಳಲ್ಲಿ ಕೇವಲ 61 ರನ್‌ಗಳಿಗೆ ಆಲೌಟಾಯಿತು. ಶಕೀಬ್ ಅಲ್ ಹಸನ್ (16ಕ್ಕೆ 4) ಒಳಗೊಂಡಂತೆ ಬಾಂಗ್ಲಾದ ಬೌಲರ್‌ಗಳು ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ಪ್ರವಾಸಿ ತಂಡದ ಇಬ್ಬರು ಮಾತ್ರ ಎರಡಂಕಿಯ ಮೊತ್ತ ಗಳಿಸಿದರು.ಇದು ಏಕದಿನ ಕ್ರಿಕೆಟ್‌ನಲ್ಲಿ ವಿಂಡೀಸ್ ತಂಡದ ಎರಡನೇ ಕನಿಷ್ಠ ಮೊತ್ತವಾಗಿದೆ. ಕೆರಿಬಿಯನ್ ನಾಡಿನ ತಂಡ 2004 ರಲ್ಲಿ ಕೇಪ್‌ಟೌನ್‌ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 54 ರನ್‌ಗಳಿಗೆ ಆಲೌಟ್ ಆಗಿತ್ತು.

ಬಾಂಗ್ಲಾ 20 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ಅಜೇಯ 36 ರನ್ ಗಳಿಸಿದ ತಮೀಮ್ ಇಕ್ಬಾಲ್ ತಂಡದ ಜಯದ ಹಾದಿಯನ್ನು ಸುಗಮಗೊಳಿಸಿದರು.ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್: 22 ಓವರ್‌ಗಳಲ್ಲಿ 61
(ಕೀರನ್ ಪೊವೆಲ್ 25, ಕಾರ್ಲೊಸ್ ಬ್ರಾಥ್‌ವೇಟ್ 11, ಶಕೀಲ್ ಅಲ್ ಹಸನ್ 16ಕ್ಕೆ 4, ನಾಸಿರ್ ಹೊಸೇನ್ 3ಕ್ಕೆ 2, ಶಫೀವುಲ್ ಇಸ್ಲಾಮ್ 21ಕ್ಕೆ 2) ಬಾಂಗ್ಲಾದೇಶ: 20 ಓವರ್‌ಗಳಲ್ಲಿ 2 ವಿಕೆಟ್‌ಗೆ 62 (ತಮೀಮ್ ಇಕ್ಬಾಲ್ ಔಟಾಗದೆ 36, ಇಮ್ರುಲ್ ಕಯೇಸ್ 11, ಮುಷ್ಫಿಕುರ್ ರಹೀಮ್ ಔಟಾಗದೆ 10) ಫಲಿತಾಂಶ: ಬಾಂಗ್ಲಾದೇಶಕ್ಕೆ 8 ವಿಕೆಟ್ ಜಯ; ಸರಣಿಯಲ್ಲಿ ವೆಸ್ಟ್ ಇಂಡೀಸ್‌ಗೆ 2-1ರ ಗೆಲುವು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry