ಭಾನುವಾರ, ಜೂನ್ 13, 2021
25 °C
ಟ್ವೆಂಟಿ–20 ವಿಶ್ವಕಪ್‌

ಬಾಂಗ್ಲಾಕ್ಕೆ ತೆರಳಿದ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಮಾರ್ಚ್‌ 16ರಿಂದ ಏಪ್ರಿಲ್‌ 6ರವರೆಗೆ ಬಾಂಗ್ಲಾದೇಶದಲ್ಲಿ ನಡೆಯುವ ಟ್ವೆಂಟಿ –20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತ ತಂಡ ಶುಕ್ರವಾರ ಬಾಂಗ್ಲಾಕ್ಕೆ ತೆರಳಿದೆ. ಮಹೇಂದ್ರ ಸಿಂಗ್‌ ದೋನಿ ನೇತೃತ್ವದ 15 ಮಂದಿ ಸದಸ್ಯರ ತಂಡ ಮುಂಬೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದದಿಂದ  ಬಾಂಗ್ಲಾಕ್ಕೆ ಪ್ರಯಾಣ ಬೆಳೆಸಿತು.ಭಾರತ ಮಾರ್ಚ್‌ 17 ರಂದು ಶ್ರೀಲಂಕಾ ಹಾಗೂ  ಮಾರ್ಚ್‌ 19ರಂದು ಇಂಗ್ಲೆಂಡ್‌ ಎದುರು ಅಭ್ಯಾಸ ಪಂದ್ಯವನ್ನಾಡಲಿದೆ.

ದೋನಿ ಪಡೆ ಮಾ.21ರಂದು ಮೀರ್‌ಪುರದಲ್ಲಿ ನಡೆಯುವ ಟೂರ್ನಿಯ ಸೂಪರ್‌ 10 ಹಂತದ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿ ಕ ಎದುರಾಳಿ ಪಾಕಿಸ್ತಾನ ತಂಡದ ಸವಾಲನ್ನು ಎದುರಿಸಲಿದ್ದು, ಮಾ.23ರಂದು ವೆಸ್ಟ್‌ ಇಂಡಿಸ್‌ ಎದುರು ಆಡಲಿದೆ.ತಂಡ ಇಂತಿದೆ: ಮಹೇಂದ್ರ ಸಿಂಗ್‌ ದೋನಿ (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ (ಉಪ ನಾಯಕ), ಸುರೇಶ್‌ ರೈನಾ, ಯುವರಾಜ್‌ ಸಿಂಗ್‌, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ಆರ್‌.ಅಶ್ವಿನ್‌, ಭುವನೇಶ್ವ ರ ಕುಮಾರ್‌, ಮಹಮ್ಮದ್‌ ಶಮಿ, ಸ್ಟುವರ್ಟ್‌ ಬಿನ್ನಿ, ಅಮಿತ್‌ ಮಿಶ್ರಾ, ಮೋಹಿತ್‌ ಶರ್ಮ ಹಾಗೂ ವರುಣ್ ಆ್ಯರನ್‌ಭಾರತದ ತಂಡದ ವೇಳಾಪಟ್ಟಿ:

ಮಾ.21:ಭಾರತ–ಪಾಕಿಸ್ತಾನ, ಮಾ.23: ಭಾರತ–ವೆಸ್ಟ್‌ ಇಂಡೀಸ್‌, ಮಾ.28: ಭಾರತ– ಕ್ವಾಲಿಫೈಯರ್‌ ಎ1, ಮಾ.30: ಭಾರತ –ಆಸ್ಟ್ರೇಲಿಯಾ (ಎಲ್ಲ ಪಂದ್ಯಗಳೂ ಮೀರ್‌ ಪುರದಲ್ಲಿ ನಡೆಯಲಿವೆ).ಐಪಿಎಲ್‌ ಅನುಭವ ನೆರವಿಗೆ ಬರಲಿದೆ: (ಢಾಕಾ ವರದಿ): ಭಾರತ ತಂಡದವರು ಹಿಂದಿನ ಐದು ತಿಂಗ ಳಲ್ಲಿ ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ ಪಂದ್ಯ ಆಡಿಲ್ಲ. ಆದರೆ ಐಪಿಎಲ್‌ ಟೂರ್ನಿಯಲ್ಲಿ ಆಡಿದ ಅನುಭವವೇ ಸಾಕು ಎಂದು ಭಾರತ ಕ್ರಿಕೆಟ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ದೋನಿ ತಿಳಿಸಿದ್ದಾರೆ.ಐಸಿಸಿ ವಿಶ್ವಕಪ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಆಡಲು  ಇಲ್ಲಿಗೆ ಬಂದಿಳಿದ ಅವರು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು. ‘ಐಪಿಎಲ್‌ನಲ್ಲಿ ಅತ್ಯುತ್ತಮ ಆಟ ಗಾರರ ಎದುರು ನಾವು ಆಡಿದ್ದೇವೆ. ಆ ಪಂದ್ಯಗಳೆಲ್ಲಾ ಅಂತರ ರಾಷ್ಟ್ರೀ ಯ ದರ್ಜೆಯಿಂದ ಕೂಡಿದ್ದವು ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.