ಗುರುವಾರ , ಜೂನ್ 24, 2021
25 °C

ಬಾಂಗ್ಲಾದೇಶಕ್ಕೆ ಪಾಕ್ ಕ್ರಿಕೆಟ್ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಐಎಎನ್‌ಎಸ್): ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲು 15 ಆಟಗಾರರನ್ನು ಒಳಗೊಂಡ ಪಾಕಿಸ್ತಾನ ಕ್ರಿಕೆಟ್ ತಂಡವು ಬುಧವಾರ ರಾತ್ರಿ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳಸಿತು. ಮಾರ್ಚ್ 11ರಂದು ಮೀರ್‌ಪುರದಲ್ಲಿ ಈ ಟೂರ್ನಿಗೆ ಚಾಲನೆ ಲಭಿಸಲಿದೆ.ಮಿಸ್ಬಾ ಉಲ್ ಹಕ್ ತಂಡದ ನೇತೃತ್ವ ವಹಿಸಿದ್ದಾರೆ. ಇತ್ತೀಚಿಗಷ್ಟೇ ನೂತನ ಕೋಚ್ ಆಗಿ ನೇಮಕವಾದ ಡೇವ್ ವಾಟ್ಮೋರ್ ತರಬೇತುದಾರರಾಗಿದ್ದಾರೆ.ಪ್ರಯಾಣ ಕೈಗೊಳ್ಳುವ ಮುನ್ನ ಮಾತನಾಡಿದ ನಾಯಕ ಮಿಸ್ಬಾ, `ಏಷ್ಯಾ ಕಪ್‌ನಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡಲಿದೆ~ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಆದರೆ, ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳೆ ಆದ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವುದು ಅಗತ್ಯ~ ಎಂದರು.`ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ಪಡೆಯುವುದು ಮುಖ್ಯ. ಇದು ಇಡೀ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ನೆರವಾಗುತ್ತದೆ~ ಎಂದು ಅವರು ತಿಳಿಸಿದರು. ಪಾಕಿಸ್ತಾನ ಮಾರ್ಚ್ 11ರಂದು ಮೊದಲ ಪಂದ್ಯವನ್ನು ಆತಿಥೇಯರ ಎದುರು ಆಡಲಿದೆ. 15 ಹಾಗೂ 18ರಂದು ಕ್ರಮವಾಗಿ ಶ್ರೀಲಂಕಾ ಮತ್ತು ಭಾರತದ ಸವಾಲನ್ನು ಎದುರಿಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.