ಬಾಂಗ್ಲಾದೇಶಕ್ಕೆ ಮಣಿದ ಜಿಂಬಾಬ್ವೆ

ಖುಲ್ನಾ, ಬಾಂಗ್ಲಾದೇಶ (ಎಎಫ್ಪಿ): ಶಬ್ಬೀರ್ ರಹಮಾನ್ ಮೊದಲು ಬ್ಯಾಟಿಂಗ್ನಲ್ಲಿ ಅಬ್ಬರಿಸಿದರು. ಬಳಿಕ ಚುರುಕಿನ ಬೌಲಿಂಗ್ ಮೂಲಕ ಮಿಂಚಿದರು.
ಇದರಿಂದಾಗಿ ಬಾಂಗ್ಲಾದೇಶ ತಂಡ ಜಿಂಬಾಬ್ವೆ ಎದುರಿನ ಎರಡನೇ ಟ್ವೆಂಟಿ–20 ಕ್ರಿಕೆಟ್ ಪಂದ್ಯದಲ್ಲಿ 42 ರನ್ ಗೆಲುವು ಸಾಧಿಸಿ ನಾಲ್ಕು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಸಾಧಿಸಿತು.
ಶೇಖ್ ಅಬು ನಾಸಿರ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಆತಿಥೇಯರು ಮೊದಲು ಬ್ಯಾಟ್ ಮಾಡಿ ನಿಗದಿತ ಓವರ್ಗಳಲ್ಲಿ 167 ರನ್ ಗಳಿಸಿದರು. ಗುರಿಯ ಎದುರು ಬ್ಯಾಟಿಂಗ್ ವೈಫಲ್ಯ ಕಂಡ ಎದುರಾಳಿ ತಂಡ ಎಂಟು ವಿಕೆಟ್ ಕಳೆದುಕೊಂಡು 125 ರನ್ಗಳಷ್ಟೇ ಕಲೆ ಹಾಕಿತು.
ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ 20 ಓವರ್ಗಳಲ್ಲಿ 3 ವಿಕೆಟ್ಗೆ 167 (ತಮೀಮ್ ಇಕ್ಬಾಲ್ 23, ಸೌಮ್ಯ ಸರ್ಕಾರ್ 43, ಶಬ್ಬೀರ್ ರಹಮಾನ್ ಔಟಾಗದೆ 43; ಗ್ರೇಮ್ ಕ್ರೀಮರ್ 29ಕ್ಕೆ1). ಜಿಂಬಾಬ್ವೆ 20 ಓವರ್ಗಳಲ್ಲಿ 8 ವಿಕೆಟ್ಗೆ 125 (ವುಸಿ ಸಿಬಂದಾ 21, ಹ್ಯಾಮಿಲ್ಟನ್ ಮಸಕಜಾ 30; ಮುಸ್ತಫಿ ಜರ್ ರಹಮಾನ್ 19ಕ್ಕೆ2, ಶಬ್ಬೀರ್ ರಹಮಾನ್ 11ಕ್ಕೆ3). ಫಲಿತಾಂಶ: ಬಾಂಗ್ಲಾದೇಶಕ್ಕೆ 42 ರನ್ ಜಯ. ಪಂದ್ಯ ಶ್ರೇಷ್ಠ: ಶಬ್ಬೀರ್ ರಹಮಾನ್.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.