ಬಾಂಗ್ಲಾದೇಶ ಓಪನ್ ಗಾಲ್ಫ್ : ಭಾರತ ತಂಡ ಚಾಂಪಿಯನ್

7

ಬಾಂಗ್ಲಾದೇಶ ಓಪನ್ ಗಾಲ್ಫ್ : ಭಾರತ ತಂಡ ಚಾಂಪಿಯನ್

Published:
Updated:

ಢಾಕಾ (ಪಿಟಿಐ): ಭಾರತದ ಮಾನವ್ ದಾಸ್ ಹಾಗೂ ಖಾಲಿನ್ ಜೋಶಿ ಅವರು ಇಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ಓಪನ್ ಅಮೆಚೂರ್ ಗಾಲ್ಫ್ ಚಾಂಪಿಯನ್‌ಷಿಪ್‌ನ ತಂಡ ವಿಭಾಗದಲ್ಲಿ ಚಾಂಪಿಯನ್ ಆಗಿದ್ದಾರೆ.

ಅವರು 285 ಶಾಟ್‌ಗಳ ಮೂಲಕ ಆತಿಥೇಯ ದೇಶದ ಸಜಿಬ್ ಅಲಿ ಹಾಗೂ ದುಲಾಲ್ ಹುಸೇನ್ (295 ಶಾಟ್‌ಗಳು) ಅವರನ್ನು ಹಿಂದಿಕ್ಕಿದರು. ಮೂರನೇ ಸ್ಥಾನ ಶ್ರೀಲಂಕಾದ ಪಾಲಾಯಿತು.

ವೈಯಕ್ತಿಕ ವಿಭಾಗದಲ್ಲಿ ಮಾನವ್ ದಾಸ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಎರಡು ಸುತ್ತುಗಳ ಅಂತ್ಯಕ್ಕೆ ಅವರೀಗ 137 ಶಾಟ್‌ಗಳೊಂದಿಗೆ ಮುಂದಿದ್ದಾರೆ. ಆದರೆ ಹಾಲಿ ಚಾಂಪಿಯನ್ ಖಾಲಿನ್ 148 ಶಾಟ್‌ಗಳೊಂದಿಗೆ ಜಂಟಿ ಎಂಟನೇ ಸ್ಥಾನದಲ್ಲಿದ್ದಾರೆ.

ಈ ಚಾಂಪಿಯನ್‌ಷಿಪ್‌ನಲ್ಲಿ ಬಾಂಗ್ಲಾ, ಭಾರತದ ಜೊತೆಗೆ ಆಫ್ಘಾನಿಸ್ತಾನ, ನೇಪಾಳ, ಭೂತಾನ್, ಪಾಕಿಸ್ತಾನ ಹಾಗೂ ಶ್ರೀಲಂಕಾದ ಗಾಲ್ಫರ್‌ಗಳು ಪಾಲ್ಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry